ಜಿ20 ರಾಷ್ಟ್ರಗಳ ಹಣಕಾಸು ಮುಖ್ಯಸ್ಥರ ಸಭೆಗೆ ಸಜ್ಜಾದ ನಂದಿಬೆಟ್ಟ!

masthmagaa.com:

ಜಿ20 ರಾಷ್ಟ್ರಗಳ ಹಣಕಾಸು ಮತ್ತು ಕೇಂದ್ರ ಬ್ಯಾಂಕ್‌ ಮುಖ್ಯಸ್ಥರ ಸಭೆ ಮುಂದಿನ ವಾರ ಬೆಂಗಳೂರು ಸಮೀಪದ ನಂದಿ ಬೆಟ್ಟದಲ್ಲಿ ನಡೆಯಲಿದೆ. ಫೆಬ್ರವರಿ 22ರಿಂದ 25ರವರೆಗೆ ನಡೆಯಲಿರುವ ಈ ಸಭೆಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೆಚ್ತಿರೋ ಸಾಲ, ಕ್ರಿಪ್ಟೋಕರೆನ್ಸಿಗಳ ನಿಯಂತ್ರಣ ಕುರಿತು ಚರ್ಚೆ ನಡೆಸಲಾಗುತ್ತೆ. ಭಾರತ, ಶ್ರೀಲಂಕಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಇತ್ತೀಚಿನ ತಿಂಗಳುಗಳಲ್ಲಿ IMF ಬೆಂಬಲವನ್ನ ಕೋರಿವೆ. ಈ ಬಗ್ಗೆ ನಂದಿ ಬೆಟ್ಟದ ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಸಭೆ ನಂತ್ರ ಮಾರ್ಚ್‌ 1 ಮತ್ತು 2 ರಂದು ನವದೆಹಲಿಯಲ್ಲಿ ವಿದೇಶಾಂಗ ಸಚಿವರ ಸಭೆ ನಡೆಯಲಿದೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply