ನಾಗಪುರ್: ಜಿ20 ಸಭೆ ಹಿನ್ನೆಲೆಯಲ್ಲಿ ಭಿಕ್ಷುಕರಿಗೆ ನಗರ ಬಿಟ್ಟು ಹೋಗುವಂತೆ ಸೂಚನೆ

masthmagaa.com:

ಪ್ರಸ್ತುತ ವರ್ಷದ ಜಿ20 ಒಕ್ಕೂಟದ ಅಧ್ಯಕ್ಷತೆ ವಹಿಸಿರೊ ಭಾರತ ಹಲವಾರು ಸಭೆಗಳನ್ನ ದೇಶಾದ್ಯಂತ ಆಯೋಜಿಸ್ತಿದೆ. ಇದರ ಭಾಗವಾಗಿ ಮಹಾರಾಷ್ಟ್ರದ ನಾಗ್ಪುರ್‌ನಲ್ಲಿ ಜಿ20 ಸಭೆ ನಡೆಸಲಾಗ್ತಿದೆ. ಇದರ ಹಿನ್ನೆಲೆಯಲ್ಲಿ ನಗರದಲ್ಲಿರೊ ಭಿಕ್ಷುಕರಿಗೆ, ಅಲೆಮಾರಿಗಳಿಗೆ ನಗರದಿಂದಲೇ ಹೊರಹೋಗುವಂತೆ ಆದೇಶ ನೀಡಲಾಗಿದೆ. ಅಲ್ದೇ ಅವರಿಗೆಲ್ಲ 2 ತಿಂಗಳ ನಂತರ ವಾಪಸ್‌ ಬರುವಂತೆ ತಿಳಿಸಲಾಗಿದೆ. ಈ ಕುರಿತು ನಾಗ್ಪುರ್ ಪೊಲೀಸ್‌ ಕಮೀಷನರ್‌ ಮಾರ್ಚ್‌ 8ರಂದು ಸುತ್ತೋಲೆಯೊಂದನ್ನ ಜಾರಿ ಮಾಡಿದ್ದಾರೆ. ಅದ್ರಲ್ಲಿ ಫುಟ್‌ಪಾಥ್‌ಗಳಲ್ಲಿ ಇರೋರ ವಿರುದ್ದ ಹಾಗೂ ಭಿಕ್ಷುಕರಂತೆ ಇರೋರ ವಿರುದ್ದ ಕ್ರಿಮಿನಲ್‌ ಆ್ಯಕ್ಶನ್‌ ತೆಗೆದುಕೊಳ್ಳಲಾಗುತ್ತೆ. ಈ ಆದೇಶ ಮಾರ್ಚ್‌ 9ರಿಂದ ಏಪ್ರಿಲ್‌ 30ರವರೆಗೆ ಜಾರಿಯಲ್ಲಿರುತ್ತೆ ಅಂತ ತಿಳಿಸಲಾಗಿದೆ. ನಾಗ್ಪುರ್ ಸಿಟಿ ಪೊಲೀಸರು ಈಗಾಗಲೇ ಬೀದಿಗಳಲ್ಲಿರೊ ಭಿಕ್ಷುಕರನ್ನ ನಗರದಿಂದ ಹೊರಗೆ ಕಳಿಸ್ತಿದಾರೆ ಎನ್ನಲಾಗಿದೆ. ಇನ್ನು ಜಿ20 ಸಭೆ ಹಿನ್ನೆಲೆಯಲ್ಲಿ ಈ ರೀತಿ ಮಾಡಲಾಗ್ತಿದೆ ಅನ್ನೊ ಆರೋಪವನ್ನ ಅಧಿಕಾರಿಗಳು ಅಲ್ಲಗೆಳೆದಿದ್ದಾರೆ. ಆದ್ರೆ ನಗರಕ್ಕೆ ವಿದೇಶಿಯರು ಬರ್ತಿದಾರೆ. ಅದಕ್ಕೆ ನೀವು ನಗರ ಬಿಟ್ಟು ಹೋಗಬೇಕು. 2 ತಿಂಗಳು ಬಿಟ್ಟು ವಾಪಾಸ್‌ ಬನ್ನಿ ಅಂತ ಪೊಲೀಸರು ಹೇಳಿದ್ದಾರೆ ಅಂತ ನಗರದಲ್ಲಿ ವಾಸಿಸೊ ಪರ್ದಿ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply