ಇಸ್ರೋ ಗುಡ್‌ ನ್ಯೂಸ್‌! ʻಗಗನ್‌ಯಾನ್‌ ಪರೀಕ್ಷೆ ಪಾಸ್‌!

masthmagaa.com:

ಬಾಹ್ಯಾಕಾಶದ ಅಚ್ಚರಿಗಳನ್ನ ತಿಳಿಯೋಕೆ ಹಂಬಲಿಸ್ತಿರೋ ಇಸ್ರೋದ ಇನ್ನೊಂದು ಸ್ಪೇಸ್‌ ಮಿಷನ್‌ ಇದೀಗ ಎಲ್ಲಾ ಟೆಸ್ಟ್‌ಗಳಲ್ಲಿ ಪಾಸ್‌ ಆಗಿ ಸ್ಪೇಸ್‌ ಕಡೆ ಪಯಣ ಬೆಳೆಸೋಕೆ ರೆಡಿಯಾಗಿದೆ. ಇಸ್ರೋದ ಮತ್ತೊಂದು ಕನಸಿನ ಕೂಸು ʻಗಗನ್‌ಯಾನ್‌ ಮಿಷನ್‌ʼ ಇದೀಗ ತನ್ನ ಮೂರು ಸ್ಟೇಜ್‌ಗಳ LVM3 ಬಾಹ್ಯಾಕಾಶ ನೌಕೆಯ CE20 ಕ್ರೈಯೋಜೆನಿಕ್‌ ಎಂಜಿನ್‌ನ ಟೆಸ್ಟ್‌ ನಡೆಸಿ ಯಶಸ್ವಿಯಾಗಿದೆ. ಹೀಗಂತ ಇಸ್ರೋ ಮಾಹಿತಿ ನೀಡಿದೆ. ಎಸ್‌… ಹ್ಯುಮನ್‌ ರೇಟೆಡ್‌ LVM3 ಅನ್ನೋ ಈ ಬಾಹ್ಯಾಕಾಶ ನೌಕೆಗೆ ಮನುಷ್ಯರನ್ನ ಹೊತ್ತೊಯ್ಯೊ ಸಾಮರ್ಥ್ಯ ಇದ್ಯಾ? ಮಾನವರನ್ನ ಸ್ಪೇಸ್‌ಗೆ ಹೊತ್ತೊಯ್ಯೋ ಎಲ್ಲಾ ರೆಕ್ವ್ಯಾರ್‌ಮೆಂಟ್‌ಗಳನ್ನ ಇದು ಮೀಟ್‌ ಮಾಡುತ್ತಾ ಅಂತ ಟೆಸ್ಟ್‌ ನಡೆಸಲಾಯ್ತು. ಇದೀಗ ಈ ಟೆಸ್ಟ್‌ನಲ್ಲಿ LVM3 ಬಾಹ್ಯಾಕಾಶ ನೌಕೆ ಸಕ್ಸಸ್‌ ಆಗಿದೆ. ಮಾನವರನ್ನ ಹೊತ್ತೊಯ್ಯೋಕೆ ತನ್ನ ಬಳಿ ಎಲ್ಲಾ ರೀತಿಯ ಸಾಮರ್ಥ್ಯ ಇದೆ ಅಂತ ಪ್ರೂವ್‌ ಮಾಡಿದೆ. ಅಂದ್ಹಾಗೆ ಈ ಬಾಹ್ಯಾಕಾಶ ನೌಕೆಯಲ್ಲಿ ಕೊನೆಯ ಸ್ಟೇಜ್‌ ಹಾಗೂ ಬಹಳ ಕಾಂಪ್ಲೆಕ್ಸ್‌ ಸ್ಟೇಜ್‌ ಅಂದ್ರೆ ಈ ಕ್ರೈಯೋಜೆನಿಕ್‌ ಸ್ಟೇಜ್‌. ಈ ಕೊನೆಯ ಕ್ರೈಯೋಜೆನಿಕ್‌ ಸ್ಟೇಜ್‌ಗೆ ಪವರ್‌ ನೀಡೋದೇ ಈ CE20 ಕ್ರೈಯೋಜೆನಿಕ್‌ ಇಂಜಿನ್‌. ಇನ್ನು ಈ ಟೆಸ್ಟ್‌ ಅಡಿಯಲ್ಲಿ ಹಲವಾರು ಟೆಸ್ಟ್‌ಗಳನ್ನ ನಡೆಸಲಾಯ್ತು. ಈ ಟೆಸ್ಟ್‌ ಭಾಗವಾಗಿ ಇದ್ರ 4 ಇಂಜಿನ್‌ಗಳು ಬೇರೆ ಬೇರೆ ಆಪರೇಟಿಂಗ್‌ ಕಂಡೀಷನ್‌ಗಳಲ್ಲಿ 39 ಬಾರಿ ʻಹಾಟ್‌ ಫೈರಿಂಗ್‌ ಟೆಸ್ಟ್‌ʼಗೆ ಒಳಗಾಗಿತ್ತು. ಸುಮಾರು 8,810 ಸೆಕೆಂಡ್‌ಗಳ ಕಾಲ. ಅಂದ್ಹಾಗೆ ಇದು 7ನೇ ಹಾಗೂ ಕೊನೆಯ ಟೆಸ್ಟ್‌ ಆಗಿದೆ. ಇನ್ನು ಈ ಮಿಷನ್‌ ಭಾರತದ ಮೊದಲ ಮಾನವ ಬಾಹ್ಯಾಕಾಶ ಮಿಷನ್‌ ಆಗಿದೆ. ಈ ಮೂಲಕ ಮೂರು ಭಾರತೀಯರನ್ನ ಭೂಮಿಯ ಲೋವರ್‌ ಆರ್ಬಿಟ್‌ಗೆ ಕಳಿಸಲಾಗುತ್ತೆ.

-masthmagaa.com

Contact Us for Advertisement

Leave a Reply