ರಾಜಘಾಟ್‌ಗೆ ಹೋಗಿ ಮಹಾತ್ಮರಿಗೆ ನಮನ ಸಲ್ಲಿಸಿದ ಗಣ್ಯರು!

masthmagaa.com:

ರಾಷ್ಟ್ರಪಿತ, ಬಾಪೂಜಿ ಮಹಾತ್ಮಗಾಂಧಿ ಹಾಗೂ‌ ಭಾರತರತ್ನ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಜನ್ಮದಿನ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನ್ ಕರ್, ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕರು ಸೇರಿದಂತೆ ಹಲವು ಗಣ್ಯರು ಇಂದು ದೆಹಲಿಯ ರಾಜ್ ಘಾಟ್ ಗೆ ತೆರಳಿ ಗೌರವ ನಮನ ಸಲ್ಲಿಸಿದ್ದಾರೆ. ಬಳಿಕ ಟ್ವೀಟ್‌ ಮಾಡಿರೋ ಮೋದಿ ಅಮೃತ ಮಹೋತ್ಸವ ಸಮಯದ ಗಾಂಧಿಯವರ ಈ ಜಯಂತಿ ತುಂಬಾ ವಿಶೇಷವಾಗಿದೆ. ಅವರ ಆದರ್ಶಗಳನ್ನ ನಾವೆಲ್ಲ ಪಾಲಿಸೋಣ ಅಂತ ಹೇಳಿದ್ದಾರೆ. ಜೊತೆಗೆ ಲಾಲ್ ಬಹದ್ದೂರ್ ಶಾಸ್ತ್ರಿ ಜಿ ತಮ್ಮ ಸರಳತೆ ಮತ್ತು ನಿರ್ಣಾಯಕತೆಗೆ ಭಾರತದಾದ್ಯಂತ ಮೆಚ್ಚುಗೆ ಪಡೆದಿದ್ದಾರೆ. ನಮ್ಮ ಇತಿಹಾಸದ ಅತ್ಯಂತ ನಿರ್ಣಾಯಕ ಸಮಯದಲ್ಲಿ ಅವರ ಕಠಿಣ ನಾಯಕತ್ವವು ಯಾವಾಗಲೂ ಸ್ಮರಣೀಯವಾಗಿದೆ ಅಂತ ಹೇಳಿದ್ದಾರೆ. ಇನ್ನು ಗಾಂಧಿಯವರ ಹುಟ್ಟುಹಬ್ಬದ ಪ್ರಯುಕ್ತ ಇಂದು ವಿಶ್ವದಾದ್ಯಂತ ಅಹಿಂಸಾ ದಿನವನ್ನಾಗಿ ಆಚರಣೆ ಮಾಡಲಾಗ್ತಿದೆ.

-masthmagaa.com

Contact Us for Advertisement

Leave a Reply