ಜಾತ್ರೆಗೆ ಬಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಮೂವರ ಬಂಧನ!

masthmagaa.com:

ಜಾತ್ರೆಗೆ ಬಂದಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿರೊ ಘಟನೆ ತುಮಕೂರಿನಲ್ಲಿ ನಡೆದಿದೆ. ಇಲ್ಲಿನ ಸಿದ್ದಗಂಗಾ ಮಠದ ಜಾತ್ರೆಯಲ್ಲಿ ಈ ಘಟನೆ ಸಂಭವಿಸಿದ್ದು, ಬಾಲಕಿ ತನ್ನ ಸ್ನೇಹಿತನೊಂದಿಗೆ ಬಂದಿದ್ಳು ಅಂತ ಗೊತ್ತಾಗಿದೆ. ಈ ವೇಳೆ ಮಠದ ಬಳಿಯ ಬೆಟ್ಟದ ಮೇಲೆ ಅವರಿಬ್ರು ಕುಳಿತಾಗ ಮೂವರು ಪುಂಡರು ವಿಡಿಯೋ ರೆಕಾರ್ಡ್‌ ಮಾಡಿದ್ದಾರೆ. ಬಳಿಕ ವಿಡಿಯೋ ವೈರಲ್‌ ಮಾಡೋದಾಗಿ ಬೆದರಿಸಿ ಬಾಲಕಿಯನ್ನ ಬೈಕ್‌ ಮೇಲೆ ಕೂರ್ಸೊಂಡು ಹೋಗಿ ಮಠದ ಪಕ್ಕದಲ್ಲೆ ಅತ್ಯಾಚಾರ ಮಾಡಿದ್ದಾರೆ. ಈ ಸಂಬಂಧ ತುಮಕೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳನ್ನ ಬಂಧಿಸಲಾಗಿದೆ.

-masthmagaa.com

Contact Us for Advertisement

Leave a Reply