ಟಾಪ್‌ ಶ್ರೀಮಂತ ಗೌತಮ್‌ ಅದಾನಿಗೆ Z ಕೆಟಗರಿ ಭದ್ರತೆ!

masthmagaa.com:

ದೇಶದ ಪ್ರಮುಖ ಉದ್ಯಮಿ ಅದಾನಿ ಗ್ರೂಪ್‌ ಮುಖ್ಯಸ್ಥ ಗೌತಮ್‌ ಅದಾನಿ ಅವ್ರ ಭದ್ರತೆ ಹೆಚ್ಚಿಸಲಾಗಿದೆ. ಸರ್ಕಾರ ಅವ್ರಿಗೆ Z ಕೆಟಗರಿ ಭದ್ರತೆ ಒದಗಿಸಿದೆ. ಐಬಿ ಗುಪ್ತಚರ ಮಾಹಿತಿ ಆಧಾರದ ಮೇಲೆ ಈ ಭದ್ರತೆಯನ್ನ ಹೆಚ್ಚಿಸಲಾಗಿದೆ ಅಂತ ಹೇಳಲಾಗಿದೆ. ಈ ಭದ್ರತೆ ಅಡಿಯಲ್ಲಿ ಒಟ್ಟು 33 ಭದ್ರತಾ ಸಿಬ್ಬಂದಿಯನ್ನ ನಿಯೋಜಿಲಾಗುವುದು. ಹಾಗೂ ಇದರ ವೆಚ್ಚವನ್ನ ಖುದ್ದು ಗೌತಮ್‌ ಅದಾನಿ ಅವರೇ ಭರಿಸಲಿದ್ದಾರೆ ಅಂತ ಗೃಹ ಸಚಿವಾಲಯ ಹೇಳಿದೆ. ಅಂದ್ಹಾಗೆ ಈ ಹಿಂದೆ ಕೂಡ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಅವರಿಗೆ Z ಕೆಟಗರಿ ಭದ್ರತೆ ಒದಗಿಸಲಾಗಿದೆ.

-masthmagaa.com

Contact Us for Advertisement

Leave a Reply