ನುಪುರ್‌ ಶರ್ಮಾಗೆ ಕರೆ ಮಾಡಿ ಮಾತನಾಡಿದ ಗೀರ್ಟ್‌ ವಿಲ್ಡರ್ಸ್‌!

masthmagaa.com:

ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಬಿಜೆಪಿಯಿಂದ ಸಸ್ಪೆಂಡ್‌ ಆಗಿದ್ದ ನುಪುರ್‌ ಶರ್ಮಾಗೆ ನೆದರ್‌ಲ್ಯಾಂಡ್‌ನ ಖ್ಯಾತ ಬಲಪಂಥೀಯ ನಾಯಕ ಗೀರ್ಟ್‌ ವಿಲ್ಡರ್ಸ್‌ ಕಾಲ್‌ ಮಾಡಿ ಮಾತುಕತೆ ಮಾಡಿದ್ದಾರೆ. ಈ ಬಗ್ಗೆ ಹೇಳ್ಕೊಂಡಿರೋ ಗೀರ್ಟ್‌, ʻನುಪುರ್‌ ಅವ್ರೊಂದಿಗೆ ಮಾತುಕತೆ ನಡೆಸಿದ್ದೇನೆ. ಕೇವಲ ಭಾರತಕ್ಕೆ ಮಾತ್ರವಲ್ದೇ ಇಡೀ ಜಗತ್ತಿಗೆ ಅವ್ರು ಸ್ವಾತಂತ್ರ್ಯದ ಸಂಕೇತ. ಅವ್ರಿಗಾಗಿರೋ ವೈಯಕ್ತಿಕ ಸ್ವಾತಂತ್ರ್ಯದ ನಷ್ಟ ಮತ್ತವ್ರು ಕಳೆದ ಎರಡು ವರ್ಷಗಳಿಂದ ಫೇಸ್‌ ಮಾಡ್ತಿರೋ ಕಾನೂನು ಸಮಸ್ಯೆ…ನಿಜವಾಗ್ಲೂ ಅವ್ರಿಗಾಗಿರೋ ಅನ್ಯಾಯ ಯಾಕಂದ್ರೆ ಅವ್ರೇನೂ ತಪ್ಪು ಮಾಡಿಲ್ಲ….ಜಸ್ಟ್‌ ಸತ್ಯವನ್ನ ಹೇಳಿದ್ದಾರೆ ಅಷ್ಟೆ. ಎಂಥಹ ಧೈರ್ಯಶಾಲಿ ಮಹಿಳೆ ಈಕೆ!ʼ ಅಂತ ಹಾಡಿ ಹೊಗಳಿದ್ದಾರೆ. ಅಂದ್ಹಾಗೆ ಈ ಮುಂಚೆ ಕೂಡ ಇದೇ ಗೀರ್ಟ್‌ ಅವರು ನುಪೂರ್‌ ಶರ್ಮಾ ಪರ ಪೋಸ್ಟ್‌ ಹಾಕಿದ್ರು. ನೆದರ್‌ಲ್ಯಾಂಡ್‌ನಲ್ಲಿ ಪ್ರಧಾನಿ ರೇಸಲ್ಲೂ ಇವರು ಇದ್ರು. ಸಧ್ಯ Party for Freedom ಪಕ್ಷದ ನಾಯಕರಾಗಿದ್ದಾರೆ

-masthmagaa.com

Contact Us for Advertisement

Leave a Reply