ಹಿಂದೂಫೋಬಿಯಾ ಖಂಡಿಸುವ ನಿರ್ಣಯ ಅಂಗೀಕರಿಸಿದ ಅಮೆರಿಕದ ಜಾರ್ಜಿಯಾ!

masthmagaa.com:

ಅಮೆರಿಕದ ಜಾರ್ಜಿಯಾ ಅಸೆಂಬ್ಲಿಯಲ್ಲಿ ಹಿಂದೂಫೋಬಿಯಾ ಅಥ್ವಾ ಭಾರತ ವಿರೋಧಿ ಕ್ರಮಗಳನ್ನ ಖಂಡಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ. ಈ ಮೂಲಕ ಜಾರ್ಜಿಯ ಇಂಥ ಶಾಸನಾತ್ಮಕ ಕ್ರಮವನ್ನ ಕೈಗೊಂಡ ಮೊದಲ ಅಮೆರಿಕದ ರಾಜ್ಯ ಅನ್ನೊ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ನಿರ್ಣಯದಲ್ಲಿ, ಹಿಂದೂಧರ್ಮ ವಿಶ್ವದ ಅತಿದೊಡ್ಡ ಮತ್ತು ಪುರಾತನ ಧರ್ಮಗಳಲ್ಲಿ ಒಂದಾಗಿದೆ. ಪರಸ್ಪರ ಗೌರವ, ಶಾಂತಿಯ ಮೌಲ್ಯಗಳು ಮತ್ತು ನಂಬಿಕೆ ಹಿಂದೂ ಧರ್ಮದ ಮೂಲವಾಗಿದ್ದು, ಜಾಗತಿಕ ಶಾಂತಿಯನ್ನು ಬಯಸುವ ಅತ್ಯಂತ ಪವಿತ್ರ ಧರ್ಮ ಅಂತ ಅಲ್ಲಿನ ಅಸೆಂಬ್ಲಿಯ ನಿರ್ಣಯದಲ್ಲಿ ಪ್ರಶಂಸೆ ವ್ಯಕ್ತಪಡಿಸಲಾಗಿದೆ.

-masthmagaa.com

Contact Us for Advertisement

Leave a Reply