19 ವರ್ಷಗಳ ನಂತರ ಒಂದಾದ ಅವಳಿ ಜವಳಿಗಳು: ಹೇಗೆ?

masthmagaa.com:

ಜಾರ್ಜಿಯ ದೇಶದ ಇಬ್ಬರು ಐಡೆಂಟಿಕ್‌ ಟ್ವಿನ್ಸ್, ಅಂದ್ರೆ ಒಂದೇ ತರ ಇರೋ ಅವಳಿ ಜವಳಿ ಅಕ್ಕತಂಗಿಯರು 19 ವರ್ಷದ ನಂತರ ಒಂದಾಗಿದ್ದಾರೆ. 2005ರಲ್ಲಿ ಜಾರ್ಜಿಯಾ ಆಸ್ಪತ್ರೆಗಳಿಂದ ಸಾವಿರಾರು ಮಕ್ಕಳನ್ನ ಕದ್ದು ಮಾರಟ ಮಾಡಲಾಗಿತ್ತು. ಇದೇ ರೀತಿ Amy Khvitia ಹಾಗೂ Ano Sartania ಅನ್ನೋ ಅವಳಿ ಜವಳಿ ಮಕ್ಕಳು ಬೇರೆ ಬೇರೆ ಕುಟುಂಬದ ಪಾಲಾಗಿದ್ರು. ಇದೀಗ ಟಿವಿ ಶೋ ಒಂದಕ್ಕೆ ಈ ಇಬ್ಬರು ಕೊಟ್ಟಿದ್ದ ಟಿಕ್‌-ಟಾಕ್‌ ವೀಡಿಯೋದಿಂದ ಇಬ್ಬರು ಒಂದಾಗಿದ್ದಾರೆ. ಅಲ್ಲದೆ ಇಷ್ಟು ವರ್ಷ ದೂರ ಇರುವಂತಾಗಿದ್ದಕ್ಕೆ ನಮಗೆ ಉತ್ತರ ಕೊಡಿ ಅಂತ ಜಾರ್ಜಿಯಾ ಸರ್ಕಾರವನ್ನ ಕೇಳಿದ್ದಾರೆ.

-masthmagaa.com

Contact Us for Advertisement

Leave a Reply