ಕೊನೆಗೂ ಈಡೇರಿದ ಯುಕ್ರೇನ್‌ ಅಧ್ಯಕ್ಷರ ಬೇಡಿಕೆ! ಯುಕ್ರೇನ್‌ಗೆ ಒಲಿದ ಯುದ್ಧ ಟ್ಯಾಂಕ್‌ಗಳ ಭಾಗ್ಯ!

masthmagaa.com:

ರಷ್ಯಾವನ್ನ ಸಮರ್ಥವಾಗಿ ಎದುರಿಸೋಕೆ ಹೆಚ್ಚು ಶಕ್ತಿಯುತವಾದ ಯುದ್ದ ಟ್ಯಾಂಕ್‌ಗಳನ್ನ ಪೂರೈಸಿ ಅಂತ ಯುಕ್ರೇನ್‌ ತನ್ನ ಮಿತ್ರ ರಾಷ್ಟ್ರಗಳಿಗೆ ಒತ್ತಾಯಿಸುತ್ತಾ ಬಂದಿದೆ. ಇದೀಗ ಕೊನೆಗೂ ಯುಕ್ರೇನ್‌ಗೆ ಯುದ್ಧ ಟ್ಯಾಂಕ್‌ಗಳು ಸಿಗಲಿವೆ. ಹೌದು, ಜರ್ಮನಿ ಹಾಗೂ ಅಮೆರಿಕ, ಯುಕ್ರೇನ್‌ಗೆ ಟ್ಯಾಂಕ್‌ಗಳನ್ನ ಒದಗಿಸೋದಾಗಿ ಹೇಳಿವೆ. ಜರ್ಮನಿಯ ಚಾನ್ಸಲರ್‌ ಓಲಾಫ್‌ ಶಾಲ್ಜ್‌ ಯುಕ್ರೇನ್‌ಗೆ ʻಲೆಪರ್ಡ್‌ 2ʼ ಯುದ್ಧ ಟ್ಯಾಂಕ್‌ಗಳನ್ನ ಕೊಡೋಕೆ ಒಪ್ಪಿದ್ದಾರೆ ಅಂತ ಹೇಳಲಾಗಿದೆ. ಇತ್ತ ಅಮೆರಿಕ ಕೂಡ ತನ್ನ M1 Abrams ಟ್ಯಾಂಕ್‌ಗಳನ್ನ ಪೂರೈಸುವ ಪ್ರಕ್ರಿಯೆಯನ್ನ ಸ್ಟಾರ್ಟ್‌ ಮಾಡುತ್ತೆ ಅಂತ ಹೇಳಿದೆ. ಇನ್ನು ಅಮೆರಿಕ ತನ್ನ Abrams ಟ್ಯಾಂಕ್‌ಗಳನ್ನ ಯುಕ್ರೇನ್‌ಗೆ ನೀಡೋದು, ರಷ್ಯಾವನ್ನ ತೀವ್ರವಾಗಿ ಪ್ರಚೋದಿಸುವ ಕ್ರಮವಾಗಿದೆ ಅಂತ ಅಮೆರಿಕದಲ್ಲಿರೊ ರಷ್ಯಾದ ರಾಯಭಾರಿ ವಾರ್ನ್‌ ಮಾಡಿದ್ದಾರೆ. ಅಲ್ದೇ ಯುಕ್ರೇನ್‌ಗೆ ಟ್ಯಾಂಕ್‌ಗಳನ್ನ ಕೊಡೋದ್ರಿಂದ ಯುದ್ಧದಲ್ಲಿ ಯಾವುದೇ ಬದಲಾವಣೆ ಆಗಲ್ಲ. ಈ ಟ್ಯಾಂಕ್‌ಗಳಿಂದ ರಷ್ಯಾ ವಿರುದ್ದ ಯುಕ್ರೇನ್‌ ಗೆಲ್ಲುತ್ತೆ ಅನ್ನೊದು ಭ್ರಮೆ ಅಂತ ಕ್ರೆಮ್ಲಿನ್‌ ಹೇಳಿದೆ.

-masthmagaa.com

Contact Us for Advertisement

Leave a Reply