ಚೀನಾದಲ್ಲಿ ಜರ್ಮನಿಯ ಚಾನ್ಸಲರ್‌: 3 ವರ್ಷಗಳಲ್ಲಿ ಮೊದಲ ಜಿ7 ನಾಯಕರ ಆಗಮನ

masthmagaa.com:

ಅಂತಾರಾಷ್ಟ್ರೀಯ ಬೆಳವಣಿಗೆಯಲ್ಲಿ ಜರ್ಮನಿ ಚಾನ್ಸಲರ್‌ ಓಲಾಫ್‌ ಶಾಲ್ಜ್‌ (Olaf Scholz) ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ರನ್ನ ಭೇಟಿ ಆಗಿದ್ದಾರೆ. ಕಳೆದ ಮೂರು ವರ್ಷದಲ್ಲಿ ಜಿ7 ಗುಂಪಿನ ನಾಯಕ ಒಬ್ರು ಚೀನಾಕ್ಕೆ ಬಂದಿರೋದು ಇದೇ ಮೊದಲ ಸಲ. ಉನ್ನತ ಮಟ್ಟದ ನಿಯೋಗದೊಂದಿಗೆ ಬಂದಿರೊ ಶಾಲ್ಜ್‌, ಚೀನಾದೊಂದಿಗೆ ಅರ್ಥಿಕ ಸಂಬಂಧಗಳನ್ನ ಬೂಸ್ಟ್‌ ಮಾಡೊ ನಿಟ್ಟಿನಲ್ಲಿ ಆಗಮಿಸಿದ್ದಾರೆ ಎನ್ನಲಾಗಿದೆ. ಇನ್ನು ಉಭಯ ನಾಯಕರ ಮಾತುಕತೆಯಲ್ಲಿ, ಎರಡು ದೇಶಗಳು ಜಗತ್ತಿನಲ್ಲಿ ಶಾಂತಿ ಸ್ಥಾಪಿಸೋ ನಿಟ್ಟಿನಲ್ಲಿ ಜೊತೆಯಾಗಿ ಕೆಲಸ ಮಾಡ್ಬೇಕು ಅಂತ ಜಿನ್‌ಪಿಂಗ್ ಹೇಳಿದ್ದಾರೆ.‌ ಇತ್ತ ಯುಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಮಾಡಿ ಅಂತಾರಾಷ್ಟ್ರೀಯ ಕಾನೂನುಗಳಿಗೆ ಪ್ರಾಬ್ಲಮ್‌ ಕ್ರಿಯೇಟ್‌ ಮಾಡ್ತಿರೊ ಹೊತ್ತಲ್ಲಿ ಉಭಯ ನಾಯಕರು ಪರಸ್ಪರ ಭೇಟಿಯಾಗಿ ಮಾತಡಿದ್ದು ಒಳ್ಳೆದು ಅಂತ ಓಲಾಫ್ ಹೇಳಿದ್ದಾರೆ. ಅಂದ್ಹಾಗೆ ರಷ್ಯಾ ಇಂಧನದ ಮೇಲೆ ಜರ್ಮನಿ ಅತಿಯಾಗಿ ಡಿಪೆಂಡ್‌ ಆಗಿದೆ. ಆದ್ರೆ ತನ್ನ ಮೇಲೆ ಪಾಶ್ಚಿಮಾತ್ಯ ದೇಶಗಳು ಹೇರಿರೊ ನಿರ್ಬಂಧಗಳ ಹಿನ್ನಲೆಯಲ್ಲಿ ರಷ್ಯಾ ಇಂಧನ ಪೂರೈಕೆಯನ್ನ ಆವಾಗಾವಾಗ ಕಟ್‌ ಮಾಡೋದ್ರಿಂದ ಜರ್ಮನಿ ಇಂಧನ ಬಿಕ್ಕಟ್ಟನ್ನ ಎದುರಿಸ್ತಿದೆ. ಇನ್ನು ಓಲಾಫ್‌ ಚೀನಾಕ್ಕೆ ಹೀಗೆ ಭೇಟಿ ನೀಡಿರೋದ್ರ ವಿರುದ್ದ ಟೀಕೆಗಳು ಕೇಳಿಬಂದಿವೆ. ಈ ರೀತಿಯ ವಿದೇಶಾಂಗ ನೀತಿಯಿಂದ ಅಂದ್ರೆ ಚೀನಾಕ್ಕೆ ಹೋಗೋದ್ರಿಂದ ಜರ್ಮನಿ ಕ್ಲೋಸ್‌ ಪಾರ್ಟ್ನರ್‌ಗಳ ಜೊತೆ ನಂಬಿಕೆ ಕಳೆದು‌ ಕೊಳ್ಳಬೇಕಾಗುತ್ತೆ. ಚೀನಾ ವಿಷಯವಾಗಿ ಚಾನ್ಸಲರ್‌ ಒಬ್ಬರೇ ನಿರ್ಧಾರ ಮಾಡಿದ್ದಾರೆ ಅಂತ ಜರ್ಮನಿ ವಿರೋಧ ಪಕ್ಷದ ಲೀಡರ್ ನಾರ್ಬರ್ಟ್‌ ರಾಯಿಟ್‌ಜನ್‌ ಆರೋಪಿಸಿದ್ದಾರೆ. ಈ ಭೇಟಿ ಕುರಿತು ಅಮೆರಿಕ ಹಾಗೂ ಯುರೋಪ್‌ನಲ್ಲಿರೊ ಪ್ರಮುಖ ನಾಯಕರ ಜೊತೆ ಈ ಮುಂಚೆಯೇ ಮಾತುಕತೆ ನಡೆಸಿದ್ದೇವೆ ಅಂತ ಜರ್ಮನಿ ಉತ್ತರಿಸಿದೆ.

-masthmagaa.com

Contact Us for Advertisement

Leave a Reply