ಪ್ಲಾಸ್ಟಿಕ್‌ ಕೊಡಿ ಗೋಲ್ಡ್‌ ಕಾಯಿನ್‌ ಪಡೆದುಕೊಳ್ಳಿ: ವಿಭಿನ್ನ ಅಭಿಯಾನ ಪ್ರಾರಂಭಿಸಿದ ಜಮ್ಮುಕಾಶ್ಮೀರ

masthmagaa.com:

ಜಮ್ಮು ಕಾಶ್ಮೀರದ ಹ‍ಳ್ಳಿಯೊಂದು ವಿಭಿನ್ನ ರೀತಿಯಲ್ಲಿ ಪ್ಲಾಸ್ಟಿಕ್‌ ಮುಕ್ತ ಅಭಿಯಾನ ಕೈಗೊಂಡಿದೆ. ಅನಂತನಾಗ್‌ ಜಿಲ್ಲೆಯಲ್ಲಿ ಬರುವ ಸದಿವಾರ ಗ್ರಾಮ ಪಂಚಾಯತಿ ಪ್ಲಾಸ್ಟಿಕ್‌ ವೇಸ್ಟ್‌ ಕಲೆಕ್ಟ್‌ ಮಾಡಿದವ್ರಿಗೆ ಗೋಲ್ಡ್‌ ಕಾಯಿನ್‌ ನೀಡೋದಾಗಿ ಹೇಳಿದೆ. ಪ್ಲಾಸ್ಟಿಕ್‌ ವೇಸ್ಟ್‌ನಿಂದ ಪರಿಸರವನ್ನ ಕಾಪಾಡುವ ನಿಟ್ಟಿನಲ್ಲಿ ವಿಭಿನ್ನ ‘Give Plastic and Take Gold’ ಕ್ಯಾಂಪೇನ್‌ ಶುರು ಮಾಡಿರೋದಾಗಿ ಹೇಳಿಕೊಂಡಿದ್ದಾರೆ. ಈ ನೂತನ ಸ್ಕೀಮ್‌ನ ಪ್ರಕಾರ ಯಾರು 20 ಕ್ವಿಂಟಾಲ್‌ ಪ್ಲಾಸಿಕ್‌ನ್ನ ಕಲೆಕ್ಟ್‌ ಮಾಡ್ಕೊಂಡ್‌ ಬಂದು ಕೊಡ್ತಾರೋ ಅವ್ರಿಗೆ ಪಂಚಾಯತಿ ಕಡೆಯಿಂದ ಒಂದು ಗೋಲ್ಡ್‌ ಕಾಯಿನ್‌ ನೀಡಲಾಗುತ್ತೆ ಅಂತ ಅಲ್ಲಿನ ಅಧ್ಯಕ್ಷರು ತಿಳಿಸಿದ್ದಾರೆ. ಪರಿಣಾಮ ರಸ್ತೆ, ಬೀದಿಗಳಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ಇದ್ದ ಗ್ರಾಮ ಇದೀಗ ಸಂಪೂರ್ಣ ಸ್ವಚ್ಛವಾಗಿದ್ದು, ಸಂಗ್ರಹವಾದ ಪ್ಲಾಸ್ಟಿಕ್ ಅನ್ನು ಪಂಚಾಯಿತಿ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಜೊತೆಗೆ ಈ ಐಡಿಯಾವನ್ನ ಜಮ್ಮ-ಕಾಶ್ಮೀರದಾದ್ಯಂತ ಅಳವಡಿಸಿಕೊಳ್ಳಲು ಅಲ್ಲಿನ ಸರ್ಕಾರ ಯೋಜಿಸುತ್ತಿದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply