ರಾಜ್ಯದಲ್ಲಿ ಹೂಡಿಕೆಗಾಗಿ 241 ಕಂಪನಿಗಳಿಗೆ ಪರ್ಮಿಶನ್: ಎಂಬಿ ಪಾಟೀಲ್‌!

masthmagaa.com:

ರಾಜ್ಯದಲ್ಲಿ ಹೂಡಿಕೆ ಮಾಡಲು 241 ಕಂಪನಿಗಳಿಗೆ ಅನುಮತಿ ನೀಡಲಾಗಿದೆ ಅಂತ ಕೈಗಾರಿಕಾ ಸಚಿವ ಎಂಬಿ ಪಾಟೀಲ್‌ ಹೇಳಿದ್ದಾರೆ. ವಿಧಾನ ಪರಿಷತ್‌ನಲ್ಲಿ​ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪಾಟೀಲ್, 241 ಕಂಪನಿಗಳ ಪೈಕಿ 24 ಕಂಪನಿಗಳು ಮಾತ್ರ ಬೆಂಗ್ಳೂರಿನಲ್ಲಿವೆ ಅಂತೇಳಿದ್ದಾರೆ. ಅಲ್ದೇ ರಾಜ್ಯಸರ್ಕಾರ ಒಟ್ಟು 6,407.82 ಕೋಟಿ ರೂಪಾಯಿ ಮೌಲ್ಯದ 128 ಯೋಜನೆಗಳಿಗೆ ಅನುಮೋದನೆ ನೀಡಿದೆ. ಇದ್ರಿಂದ ರಾಜ್ಯಾದ್ಯಂತ 33 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ಕಲ್ಪಿಸಬಹುದು ಅಂತ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply