ʼಇಂಡಿಯಾ ಹುಟ್ಟಿಸಿದ್ದು ಆಸ್ಟ್ರೇಲಿಗʼ ಪ್ಯಾಟ್‌ ಕಮಿನ್ಸ್‌, ಮ್ಯಾಕ್ಸ್‌ವೆಲ್‌ ದುರ್ವರ್ತನೆ!

masthmagaa.com:

ಐಸಿಸಿ ವಿಶ್ವಕಪ್‌ ಫೈನಲ್‌ನಲ್ಲಿ ಭಾರತದ ವಿರುದ್ಧ ಗೆದ್ದಿರೋ ಆಸ್ಟ್ರೇಲಿಯಾ ತಂಡದ ಆಟಗಾರರು ತಮ್ಮ ದುರಹಂಕಾರ ನಡುವಳಿಕೆಯನ್ನ ಮುಂದುವರೆಸಿದ್ದಾರೆ. ಇದೀಗ ಆಸ್ಟ್ರೇಲಿಯಾ ಆಲ್‌ರೌಂಡರ್‌ ಹಾಗೂ ಆರ್‌ಸಿಬಿ ಆಟಗಾರ ಗ್ಲೆನ್‌ ಮ್ಯಾಕ್ಸ್‌ವೆಲ್‌ ವಿರಾಟ್‌ ಕೊಹ್ಲಿ ಸೇರಿದಂತೆ ಟೀಮ್‌ ಇಂಡಿಯಾ ಪ್ಲೇಯರ್ಸ್‌ನ್ನ ಅವಹೇಳನಕಾರಿ ಮಾಡೋ ಪೋಸ್ಟ್‌ ಒಂದಕ್ಕೆ ಲೈಕ್‌ ಮಾಡಿದ್ದಾರೆ. ಈ ಮೂಲಕ ಆಟಗಾರರಿಗೆ ಅವಮಾನ ಮಾಡಿದ್ದಾರೆ. ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ, ಬ್ಯಾಟರ್‌ ವಿರಾಟ್‌ ಕೊಹ್ಲಿ ಹಾಗೂ ಇತರ ಆಟಗಾರರ ಮುಖ ಇರೋ ನವಜಾತ ಶಿಶುಗಳು ಹಾಗೂ ಆಸ್ಪತ್ರೆಯ ಬೆಡ್‌ ಮೇಲೆ ಆಸ್ಟ್ರೇಲಿಯಾ ಬ್ಯಾಟರ್‌ ಟ್ರಾವಿಸ್‌ ಹೆಡ್‌ ಫೇಸ್‌ ಇರೋ ಫೋಟೋವನ್ನ ಆಸಿಸ್‌ ಪತ್ರಿಕೆಯೊಂದು ಪೋಸ್ಟ್‌ ಮಾಡಿದೆ. ಅದಕ್ಕೆ ‘ಸೌತ್ ಆಸ್ಟ್ರೇಲಿಯನ್ ಮ್ಯಾನ್ ಗಿವ್ಸ್ ಬರ್ತ್ ಟು ವರ್ಲ್ಡ್ ರೆಕಾರ್ಡ್ 11 ಸನ್ಸ್’ ಅಂತ ಟೈಟಲ್‌ ಕೊಡಲಾಗಿದೆ. ಅಂದ್ರೆ ಟೋಟಲ್‌ ಈ ಪೋಸ್ಟ್‌ ಅರ್ಥ ಏನಂದ್ರೆ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ಕೊಟ್ಟು ಆಸಿಸ್‌ ಗೆಲುವಿಗೆ ಕಾರಣನಾದ ಟ್ರಾವಿಸ್‌ 11 ಜನ ಭಾರತದ ತಂಡದ ಆಟಗಾರರ ಅಪ್ಪ ಅನ್ನೋ ರೀತಿ ಬಿಂಬಿಸಲಾಗಿದೆ. ಈ ಪೋಸ್ಟ್‌ಗೆ ಮ್ಯಾಕ್ಸ್‌ವೆಲ್‌ ಮತ್ತು ಎಕ್ಸ್‌ ಆರ್‌ಸಿಬಿ ಪ್ಲೇಯರ್‌ ಆರನ್‌ ಫಿಂಚ್‌ ಲೈಕ್‌ ಮಾಡಿದ್ದಾರೆ. ಅಷ್ಟೆ ಅಲ್ದೆ ಪ್ಯಾಟ್‌ ಕಮಿನ್ಸ್‌ ನಗುವ ಇಮೋಜಿ ಕಮೆಂಟ್‌ ಮಾಡಿದ್ದು, ಇದು ಭಾರಿ ವಿವಾದಕ್ಕೆ ಕಾರಣವಾಗಿದೆ. ಅದ್ರಲ್ಲೂ ಮ್ಯಾಕ್ಸ್‌ವೆಲ್‌ಗೆ ಕೊಹ್ಲಿ ಜೊತೆ ಒಳ್ಳೆ ಫ್ರೆಂಡ್ಶಿಪ್‌ ಇದೆ. ಇಬ್ರೂ ಆರ್‌ಸಿಬಿ ತಂಡಕ್ಕೆ ಆಡ್ತಾರೆ. ಅಲ್ದೆ ಫೈನಲ್‌ ಪಂದ್ಯ ಮುಗ್ದಾಗ್ಲೂ ಕೊಹ್ಲಿ ತಮ್ಮ ಜೆರ್ಸಿ ಕೊಟ್ಟಿದ್ರು. ಹೀಗಿದ್ದೂ ಮ್ಯಾಕ್ಸ್‌ವೆಲ್‌ ಆ ಪೋಸ್ಟ್‌ಗೆ ಲೈಕ್‌ ಕೊಟ್ಟಿರೋದು ಭಾರಿ ಚರ್ಚೆಗೆ ಕಾರಣವಾಗಿದ್ದಲ್ದೆ, ಭಾರತೀಯ ಕ್ರಿಕೆಟ್‌ ಅಭಿಮಾನಿಗಳಿಗೆ ಬೇಸರ ತಂದಿದೆ. ಅಂದ್ಹಾಗೆ ವಿಶ್ವಕಪ್‌ ಗೆದ್ದ ಬಳಿಕ ಆಸಿಸ್‌ ಪ್ಲೇಯರ್‌ ಮಿಚಲ್‌ ಮಾರ್ಷ್‌ ಕಪ್‌ ಮೇಲೆ ಕಾಲಿಟ್ಟಿದ್ದ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿತ್ತು. ವಿವಾದಕ್ಕೆ ಕಾರಣವಾಗಿತ್ತು. ಈಗ ಮತ್ತೆ ಇನ್ನಷ್ಟು ಹರ್ಟ್‌ ಮಾಡೋ ಕೆಲಸ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply