ಚೀನಾ ವಿರುದ್ದ ಭುಗಿಲೆದ್ದ ಆಕ್ರೋಶ: ವಿಶ್ವದ ಹಲವು ಕಡೆ ಪ್ರತಿಭಟನೆ!

masthmagaa.com:

ಅಕ್ಬೋಬರ್‌ 01ನ್ನ ಚೀನಾದಲ್ಲಿ ನ್ಯಾಷನಲ್‌ ಡೇ ಅಂತ ಆಚರಿಸ್ತಿದ್ರೆ ಇತ್ತ ಚೀನಾದ ವಿರುದ್ದ ಜಗತ್ತಿನ ಹಲವು ಕಡೆ ಪ್ರತಿಭಟನೆ ನಡೆಸಲಾಗಿದೆ. ಜಪಾನ್‌, ನೆದರ್ಲ್ಯಾಂಡ್‌, ಆಸ್ಟ್ರೀಯ ಸೇರಿದಂತೆ ಹಲವು ದೇಶಗಳಲ್ಲಿರುವ ಚೀನಾದ ರಾಯಭಾರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗಿದೆ. ಜಪಾನ್‌ನಲ್ಲಿ ಇದು ದೊಡ್ಡ ಮಟ್ಟದಲ್ಲಿ ನಡೆದಿದ್ದು ಜನ ಬೀದಿಗಳಿದು ಚೀನಾ ವಿರುದ್ದ ಘೋಷಣೆ ಕೂಗಿದ್ದಾರೆ. ಟೋಕಿಯೋದಲ್ಲಿರುವ ಚೀನಾ ರಾಯಭಾರ ಕಛೇರಿಯ ಮುಂದೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜಪಾನಿಗರು, ಚೀನಾ ತನ್ನ ದೇಶದ ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರೋ ದಬ್ಬಾಳಿಕೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಬೆಟ್‌ ಬಾವುಟಗಳನ್ನ ಹಿಡಿದು ಟಿಬೆಟಿಯನ್ನರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ದೇ, ಕ್ಸಿನ್‌ ಜಿಯಾಂಗ್‌ ಪ್ರಾಂತ್ಯದ ಉಯಿಘರ್‌ ಮುಸಲ್ಮಾನರ ಮೇಲೆ ಕಮ್ಯೂನಿಸ್ಟ್‌ ಪಾರ್ಟಿ ನಡೆಸ್ತಿರೋ ದಬ್ಬಾಳಿಯನ್ನ ನಾವೂ ತೀವ್ರವಾಗಿ ಖಂಡಿಸ್ತೀವಿ. ಚೀನಾ ಮಾನವಹಕ್ಕುಗಳಿಕೆ ಯಾವುದೇ ಬೆಲೆಯನ್ನೂ ಕೊಡ್ತಿಲ್ಲ ಅಂತ ಆಕ್ರೋಶ ಹೊರಹಾಕಿದ್ದಾರೆ.

-masthmagaa.com

Contact Us for Advertisement

Leave a Reply