ಮೇ 9ರವರೆಗೆ ವಿಮಾನ ಹಾರಾಟ ಸ್ಥಗಿತಗೊಳಿಸಿದ ಗೋ ಫಸ್ಟ್‌!

masthmagaa.com:

ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿರೊ ಗೋ ಫಸ್ಟ್‌ ಏರ್‌ಲೈನ್ಸ್‌ ಮೇ 9 ರವರೆಗಿನ ಎಲ್ಲ ವಿಮಾನ ಹಾರಾಟವನ್ನ ಸ್ಥಗಿತಗೊಳಿಸಿದೆ. ಅಲ್ದೇ ಮೇ 15ರವರೆಗೆ ಟಿಕೆಟ್‌ ಮಾರಾಟವನ್ನ ಕೂಡ ಸಸ್ಪೆಂಡ್‌ ಮಾಡಿದೆ. ಇತ್ತ ವಿಮಾನಗಳು ಕ್ಯಾನ್ಸಲ್‌ ಆದ ಹಿನ್ನೆಲೆ ಪ್ರಯಾಣಿಕರಿಗೆ ಟಿಕೆಟ್‌ ಹಣವನ್ನ ರಿಫಂಡ್‌ ಮಾಡುವಂತೆ DGCA ಸೂಚಿಸಿದೆ. ಅಂದ್ಹಾಗೆ ಅಮೆರಿಕ ಮೂಲದ ಜೆಟ್‌ ಇಂಜಿನ್‌ಗಳ ತಯಾರಕ ಕಂಪನಿ ಇಂಜಿನ್‌ಗಳನ್ನ ಸಪ್ಲೈ ಮಾಡದಿದ್ದಕ್ಕೆ ಈ ಹಿಂದೆ 50 ಕ್ಕೂ ಅಧಿಕ ವಿಮಾನಗಳ ಹಾರಾಟವನ್ನ ನಿಲ್ಲಿಸಿತ್ತು. ಹೀಗಾಗಿ ಗೋ ಫಸ್ಟ್‌ ಆರ್ಥಿಕ ಸಮಸ್ಯೆಯನ್ನ ಅನುಭವಿಸ್ತಿದೆ.

-masthmagaa.com

Contact Us for Advertisement

Leave a Reply