ಕಾಳಿ ವಿವಾದ: ಮೊದಲ ಬಾರಿ ಮೋದಿ ಮಾತು! ಹೇಳಿದ್ದೇನು ಗೊತ್ತಾ?

masthmagaa.com:

ದೇಶದಲ್ಲಿ ಕಳೆದ ಕೆಲ ದಿನಗಳಿಂದ ಕಾಳಿ ದೇವಿ ವಿಚಾರಕ್ಕೆ ಸಂಬಂಧಪಟ್ಟಂತೆ ಭಾರಿ ವಿವಾದ ನಡೀತಿದೆ. ಕಾಳಿ ಕೈಗೆ ಸಿಗರೇಟ್‌ ಕೊಟ್ಟು ಅದರ ಹಿಂದೆ ಸಲಿಂಗಿಗಳನ್ನ ಪ್ರತಿನಿಧಿಸುವ ಬಾವುಟವನ್ನ ಕೊಟ್ಟಿದ್ದ ಫೋಸ್ಟ್‌ ಸರಿನೋ, ತಪ್ಪೋ ಅಂತ ಚರ್ಚೆ ನಡೀತಿದೆ. ಟಿಎಂಸಿ ಸಂಸದೆ ಮೊಹುವಾ ಮೊಯಿತ್ರಾ ಅಂತೂ, ಕಾಳಿ ದೇವಿ ಮಾಂಸ ತಿನ್ನೋ ದೇವರು, ಮದ್ಯಪಾನ ಮಾಡೋ ದೇವರು ಅಂತ ಹೇಳಿ ಉರಿಯೋ ಬೆಂಕಿಗೆ ತುಪ್ಪ ಸುರಿದಿದ್ದರು. ಇದೆಲ್ಲದರ ನಡುವೆ ಇವತ್ತು ಪ್ರಧಾನಿ ಮೋದಿ ಕಾಳಿ ದೇವಿ ಬಗ್ಗೆ ಮಾತನಾಡಿದ್ದಾರೆ. ಲೋಕ ಕಲ್ಯಾಣಕ್ಕಾಗಿ ಮುನ್ನಡೆಯುತ್ತಿರುವ ದೇಶಕ್ಕೆ ಕಾಳಿ ಮಾತೆಯ ಆಶೀರ್ವಾದ ಇದ್ದೇ ಇರುತ್ತೆ ಅಂತ ಮೋದಿ ಹೇಳಿದ್ದಾರೆ. ಈ ಮೂಲಕ ವಿಪಕ್ಷಗಳಿಗೆ ಟಾಂಗ್ ಕೊಟ್ಟಿದ್ದಾರೆ. ರಾಮಕೃಷ್ಣ ಆಶ್ರಮದ ಸ್ವಾಮಿ ಆತ್ಮಾಸ್ಥಾನಂದ ಅವರ ಜನ್ಮದಿನದ ಅಂಗವಾಗಿ ವಿಡಿಯೋ ಕಾನ್ಫರೆನ್ಸ್​ನಲ್ಲಿ ಭಾಗವಹಿಸಿದ ಪ್ರಧಾನಿ ಈ ರೀತಿ ಹೇಳಿದ್ದಾರೆ. ಜೊತೆಗೆ, ರಾಮಕೃಷ್ಣರು ಕಾಳಿ ಪೂಜೆ ಮಾಡಿ ಅವಳ ಶಕ್ತಿಯ ಬಗ್ಗೆ ಜಗತ್ತಿಗೆ ಸಾರುವ ಕೆಲಸ ಮಾಡಿದ್ರು. ಭಾರತದ ಸಂತ ಪರಂಪರೆ ಯಾವಾಗಲೂ ಏಕಭಾರತ ಶ್ರೇಷ್ಠ ಭಾರತದ ಪರವಾಗಿ ನಿಂತಿದೆ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply