ಗೂಗಲ್‌ನ ಟಾಪ್‌ ಸಿನಿಮಾ ಸರ್ಚ್‌ನಲ್ಲಿ ಕೆಜಿಎಫ್‌ 2 ಹಾಗೂ ಕಾಂತಾರ!

masthmagaa.com:

2022ರಲ್ಲಿ ಭಾರತದಲ್ಲಿ ಸರ್ಚ್‌ ಮಾಡಿದ ಟಾಪ್‌ 5 ಸಿನಿಮಾಗಳಲ್ಲಿ ಕೆಜಿಎಫ್‌ 2 ಹಾಗೂ ಕಾಂತಾರ ಮೂವೀಗಳು ಸ್ಥಾನ ಪಡೆದುಕೊಂಡಿವೆ. ದೇಶದಲ್ಲಿ ಸಿನಿಪ್ರಿಯರು ಅತಿಹೆಚ್ಚು ಹುಡುಕಿದ ಸಿನಿಮಾಗಳ ಪಟ್ಟಿಯನ್ನ ಗೂಗಲ್‌ ಬಿಡುಗಡೆ ಮಾಡಿದೆ. ಅದ್ರಲ್ಲಿ ರಣಬೀರ್‌ ಕಪೂರ್-‌ ಆಲಿಯಾ ಭಟ್‌ ಜೋಡಿಯ ಬ್ರಹ್ಮಾಸ್ತ್ರ ಸಿನಿಮಾ ಮೊದಲ ಸ್ಥಾನವನ್ನ ಪಡೆದುಕೊಂಡ್ರೆ, ರಾಕಿಂಗ್‌ ಸ್ಟಾರ್‌ ಯಶ್‌ ಅವರ ಕೆಜಿಎಫ್‌ 2 ಎರಡನೇ ಸ್ಥಾನದಲ್ಲಿದೆ. 3ನೇ ಸ್ಥಾನದಲ್ಲಿ ರಾಜಮೌಳಿ ನಿರ್ದೇಶನದ RRR, 4ನೇ ಸ್ಥಾನದಲ್ಲಿ ರಿಷಬ್‌ ಶೆಟ್ಟಿಯ ಕಾಂತಾರ ಹಾಗೂ 5ನೇ ಸ್ಥಾನದಲ್ಲಿ ಕಾಶ್ಮೀರಿ ಫೈಲ್ಸ್‌ ಇದೆ.

-masthmagaa.com

Contact Us for Advertisement

Leave a Reply