ಸ್ವೀಡನ್‌ ಹಾಗೂ ಫಿನ್‌ಲ್ಯಾಂಡ್‌ ನ್ಯಾಟೋ ಎಂಟ್ರಿ ಬಹುತೇಕ ಖಚಿತ: ಟರ್ಕಿಯಿಂದಲೂ ಬೆಂಬಲ

masthmagaa.com:

ವಿಶ್ವದ ಅತಿದೊಡ್ಡ ಹಾಗೂ ಡೆಡ್ಲಿ ರಕ್ಷಣಾ ಕೂಟ ನ್ಯಾಟೋ ಸೇರೋಕೆ ಹಪಹಪಿಸ್ತಿರೋ ಸ್ವೀಡನ್‌ ಹಾಗೂ ಫಿನ್ ಲ್ಯಾಂಡ್‌ಗಳಿಗ ಬಹುದೊಡ್ಡ ಗೆಲುವಾಗಿದೆ. ರಷ್ಯಾ ಭಯವನ್ನ ಎದುರಿಸಿ ಆತುರಾತುರಾವಾಗಿ ನ್ಯಾಟೋಗೆ ಅರ್ಜಿ ಹಾಕಿರೋ ಈ ಎರಡೂ ದೇಶಗಳ ಸದಸ್ಯತ್ವಕ್ಕೆ ನ್ಯಾಟೋ ಕಂಟ್ರಿ ಟರ್ಕಿ ಅಡ್ಡಗಾಲು ಹಾಕಿತ್ತು. ಇದೀಗ ಆ ವಿಘ್ನ ಕೂಡ ನಿವಾರಣೆಯಾಗಿದ್ದು ನ್ಯಾಟೋ ಅನ್ನೋ ಉಕ್ಕಿನ ಪಂಜರ ಸೇರೋದು ಬಹುತೇಕ ಫಿಕ್ಸ್‌ ಆಗಿದೆ. ನಾರ್ಡಿಕ್‌ ದೇಶಗಳಾದ ಫಿನ್‌ಲ್ಯಾಂಡ್‌ ಹಾಗೂ ಸ್ವೀಡನ್‌ ನ್ಯಾಟೋ ಸೇರೋಕೆ ನಾವು ಬೆಂಬಲ ಸೂಚಿಸ್ತೀವಿ ಅಂತ ಅಧ್ಯಕ್ಷ ತಾಯಿಪ್‌ ಎರ್ಡೋಗಾನ್‌ ಅನೌನ್ಸ್‌ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರೋ ಅವ್ರು ʻ ನಮಗೆ ಎರಡು ದೇಶಗಳಿಂದ ಏನ್‌ ಬೇಕಾಗಿತ್ತೋ ಅದು ಸಿಕ್ಕಿದೆ ಅಂತ ಹೇಳಿದ್ದಾರೆ. ಟರ್ಕಿ ನಿಷೇಧ ಮಾಡಿರೋ ಕುರ್ದಿಶ್‌ ಪಡೆಗಳಿಗೆ ಸ್ವೀಡನ್‌ ಮತ್ತು ಫಿನ್‌ಲ್ಯಾಂಡ್‌ ಸಹಕಾರ ನೀಡ್ತಿದ್ವು. ಇದನ್ನ ನಿಲ್ಲಿಸಿದ್ರೆ ನ್ಯಾಟೋಗೆ ಸೇರೋಕೆ ಬೆಂಬಲ ನೀಡ್ತಿವಿ ಅಂತ ಟರ್ಕಿ ಹೇಳಿತ್ತು. ಈ ಕಂಡಿಷನ್‌ಗೆ ಈಗ ಉಭಯದೇಶಗಳು ಒಪ್ಪಿಕೊಂಡಿದ್ದು, ಟರ್ಕಿ ಜೊತೆ ಸಹಕರಿಸ್ತೀವಿ ಅಂತ ಒಪ್ಪಿಕೊಂಡಿರೋದಾಗಿ ಎರ್ಡೋಗಾನ್‌ ಹೇಳಿದ್ದಾರೆ. ಈ ಹಿಂದೆಯೇ ನಾವು ಗ್ರೀಸ್‌ಗೆ ನ್ಯಾಟೋ ಸೇರೋಕೆ ಅನುಮತಿ ಕೊಟ್ಟಿದ್ದೀವಿ. ಇಂತಹ ತಪ್ಪು ಇನ್ನೊಮ್ಮೆ ಮಾಡೋದಿಲ್ಲ. ಅವರು ಯಾವ ರೀತಿ ನ್ಯಾಟೋ ಸೇರ್ತಾರೋ ನೋಡೋಣ ಅಂತ ಟರ್ಕಿ ಅಬ್ಬರಿಸಿತ್ತು. ಇದರ ಬೆನ್ನಲ್ಲೇ ಅಮೆರಿಕ ಮತ್ತು ಇನ್ನಿತರ ಯುರೋಪ್‌ ದೇಶಗಳು ಟರ್ಕಿಯ ಮನವೊಲಿಸೋಕೆ ಭಾರಿ ಸರ್ಕಸ್‌ ಮಾಡಿದ್ವು. ಕಡೆಗೂ ಆ ಮಾತುಕತೆ ಯಶಸ್ವಿಯಾಗಿದೆ. ಇತ್ತ ಟರ್ಕಿಯಿಂದ ಈ ಮಾತು ಕೇಳಿಬರ್ತಿದ್ದಂತೆ ನ್ಯಾಟೋ ನಾಯಕರು ಇಂದು ಎರಡು ದೇಶಗಳನ್ನ ಮೈತ್ರಿಕೂಟಕ್ಕೆ ಸೇರಿಕೊಳ್ಳುವಂತೆ ಆಹ್ವಾನ ನೀಡಲಿದ್ದಾರೆ ಅಂತ ನ್ಯಾಟೋ ಮುಖ್ಯಸ್ಥ ಜೆನ್ಸ್ ಸ್ಟಾಲ್ಟನ್‌ಬರ್ಗ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply