17% ವೇತನ ಏರಿಕೆ ಆದೇಶದ ಬೆನ್ನಲ್ಲೇ ಮುಷ್ಕರ ಹಿಂಪಡೆದ ಸರ್ಕಾರಿ ನೌಕರರು!

masthmagaa.com:

7ನೇ ವೇತನ ಆಯೋಗದ ವರದಿಯ ಶಿಫಾರಸುಗಳನ್ನ ಜಾರಿ ಮಾಡುವಂತೆ ಸರ್ಕಾರಿ ನೌಕರರು ನಡೆಸಿದ್ದ ಮುಷ್ಕರದ ಬಿಸಿ ಸರ್ಕಾರಕ್ಕೆ ಮೊದಲ ದಿನವೇ ತಟ್ಟಿದೆ. 2023ರ ಏಪ್ರಿಲ್‌ 1ರಿಂದ ಅನ್ವಯ ಆಗುವಂತೆ ಸರ್ಕಾರಿ ನೌಕರರ ವೇತನವನ್ನ ಶೇ.17ರಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ವೇತನ ಹೆಚ್ಚಳದಿಂದ ಸರ್ಕಾರದ ಮೇಲೆ ಸುಮಾರು 12 ಸಾವಿರ ಕೋಟಿ ರೂ. ಹೊರೆಯಾಗಲಿದೆ ಅಂತ ಹೇಳಲಾಗಿದೆ. ಇನ್ನು ಚಾಲ್ತಿಯಲ್ಲಿರೊ ಹೊಸ ಪಿಂಚಣಿ ಯೋಜನೆ ಬದಲಾಗಿ ಹಳೆಯ ಪಿಂಚಣಿ ಯೋಜನೆ ಜಾರಿ ಕುರಿತು ಪರಿಶೀಲನೆ ನಡೆಸಲು ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ರಚಿಸಿ ಆದೇಶ ಹೊರಡಿಸಲಾಗಿದೆ. ಈ ಹಿನ್ನಲೆಯಲ್ಲಿ ಮುಷ್ಕರವನ್ನ ವಾಪಸ್‌ ಪಡೆಯುತ್ತೇವೆ ಅಂತ ನೌಕರರ ಸಂಘದ ಅಧ್ಯಕ್ಷ ಸಿ ಎಸ್‌ ಷಡಕ್ಷರಿ ಹೇಳಿದ್ದಾರೆ. ಆದ್ರೆ ಷಡಕ್ಷರಿ ಅವರ ಈ ನಿರ್ಧಾರಕ್ಕೆ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ. ಷಡಕ್ಷರಿ ಅವರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದ್ದು ಸರಿಯಲ್ಲ. ಹೋರಾಟದಲ್ಲಿ ರಾಜಕಾರಣ ಮಿಕ್ಸ್‌ ಆಗಬಾರ್ದು. ನಮ್ಮ ಬೇಡಿಕೆ ಸರಿಯಾಗಿ ಈಡೇರುವುದಕ್ಕೂ ಮುನ್ನವೇ ಈ ಆತುರದ ನಿರ್ಧಾರವೇಕೆ? ಅವರು ಏನೇ ಹೇಳಲಿ ನಾವು ಹೋರಾಟವನ್ನು ಮುಂದುವರಿಸುತ್ತೇವೆ ಅಂತ ಗುರುಸ್ವಾಮಿ ಹೇಳಿದ್ದಾರೆ. ಇನ್ನೊಂದ್‌ ಕಡೆ ನೌಕರರ ಮುಷ್ಕರಕ್ಕೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಕೂಡ ಬೆಂಬಲ ನೀಡಿತ್ತು. ಇದರಿಂದ ರಾಜ್ಯದ ಹಲವೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಬಂದ್‌ ಆಗಿದೆ. ಇದ್ರಿಂದ ಕೆಲ ಆಸ್ಪತ್ರೆಗಳಲ್ಲಿ ರೋಗಿಗಳು ಪರದಾಡುವ ಸ್ಥಿತಿ ಎದುರಾಗಿದೆ.

-masthmagaa.com

Contact Us for Advertisement

Leave a Reply