ಬಿಹಾರ್‌ಗೆ ʻಸ್ಪೆಷಲ್‌ ಸ್ಟೇಟ್‌ʼ ಮಾನ್ಯತೆ ಕೊಡಿ: ಅಮಿತ್‌ ಬಳಿ ನಿತೀಶ್‌ ಮನವಿ!

masthmagaa.com:

ಬಿಹಾರ್‌ನ್ನ ಸ್ಪೆಷಲ್‌ ರಾಜ್ಯಗಳ ಗುಂಪಿಗೆ ಸೇರಿಸಿ ಅಂತ ಬಿಹಾರ್‌ ಸಿಎಂ ನಿತೀಶ್‌ ಕುಮಾರ್‌ ಅಮಿತ್‌ ಶಾ ಅವ್ರಿಗೆ ಒತ್ತಾಯ ಮಾಡಿದ್ದಾರೆ. ಬಿಹಾರ್‌ನ ಪಾಟ್ನಾದಲ್ಲಿ ಡಿಸೆಂಬರ್‌ 10 ರಂದು ನಡೆದ 26ನೇ ಈಸ್ಟರ್ನ್‌ ಜೋನಲ್‌ ಕೌನ್ಸಿಲ್‌ ಮೀಟಿಂಗ್‌ ವೇಳೆ ಈ ರೀತಿ ರಿಕ್ವೆಸ್ಟ್‌ ಮಾಡಿಕೊಂಡಿದ್ದಾರೆ. ಈ ವೇಳೆ ಮುಂದಿನ 5 ವರ್ಷಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಎಷ್ಟು ಹಣ ಖರ್ಚಾಗಬಹುದು ಮತ್ತು ಜಾತಿ ಆಧಾರಿತ ಸರ್ವೇ ಡಿಟೇಲ್ಸ್‌ನ್ನ ಅಮಿತ್‌ ಶಾ ಗೆ ನೀಡಿದ್ದಾರೆ. ನಂತರ ಈ ಕುರಿತು ಮಾತನಾಡಿದ ಅವ್ರು, ʻಒಟ್ಟು 2.5 ಲಕ್ಷ ಕೋಟಿ ರೂಪಾಯಿಗಳನ್ನ ಅಭಿವೃದ್ಧಿ ಕಾರ್ಯಗಳಿಗೆ ಖರ್ಚು ಮಾಡಲಾಗುತ್ತೆ. ಮುಂದಿನ 5 ವರ್ಷಗಳಲ್ಲಿ ಈ ಎಲ್ಲಾ ಕೆಲಸಗಳು ಕಂಪ್ಲೀಟ್‌ ಆಗುತ್ತೆ. ಆದ್ರೆ ಕೇಂದ್ರ ಸರ್ಕಾರದಿಂದ ಬಿಹಾರ್‌ಗೆ ಸ್ಪೆಷಲ್‌ ಸ್ಟೇಟ್‌ ಅನ್ನೋ ಮಾನ್ಯತೆ ಸಿಕಿದ್ರೆ, ಈ ಕೆಲಸಗಳು ಬಹಳ ಕಡಿಮೆ ಟೈಮ್‌ನಲ್ಲಿ ಮುಗಿಯುತ್ತೆ. ನಾವು 2010 ರಿಂದಲೂ ಈ ಡಿಮ್ಯಾಂಡ್‌ ಮಾಡ್ತಲೇ ಬಂದಿದ್ದೇವೆ. ʻಸ್ಪೆಷಲ್‌ ಸ್ಟೇಟ್‌ʼ ಮಾನ್ಯತೆ ಪಡೆಯೋಕೆ ಬೇಕಾಗಿರೋ ಎಲ್ಲಾ ಕಂಡೀಷನ್ಸ್‌ನ್ನ ಬಿಹಾರ್‌ ಪೂರ್ಣ ಮಾಡುತ್ತೆ. ಜೊತೆಗೆ ಜಾತಿ ಆಧಾರಿತ ಸರ್ವೇ ಕೂಡ ಮಾಡಿ ಆಗಿದೆ. ಆದ್ರಿಂದ ಬಿಹಾರ್‌ಗೆ ಸ್ಪೆಷಲ್‌ ಸ್ಟೇಟ್‌ ಮಾನ್ಯತೆ ನೀಡ್ತೀರಿ ಅನ್ನೋ ನಂಬಿಕೆ ನನಗಿದೆʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply