ಜೆಟ್‌ಪ್ಯಾಕ್‌ ಪರೀಕ್ಷೆ ನಡೆಸಿದ ಭಾರತೀಯ ಸೇನೆ! ಏನಿದು ಜೆಟ್‌ಪ್ಯಾಕ್‌?

masthmagaa.com:

ಭಾರತ- ಚೀನಾ ಗಡಿ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನ ಇನ್ನಷ್ಟು ಹೆಚ್ಚಿಸೋಕೆ ಸೇನೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಬ್ರಿಟಿಷ್‌ ಕಂಪನಿ ಗ್ರಾವಿಟಿ ಇಂಡಸ್ಟ್ರೀಸ್‌ ಅಭಿವೃದ್ಧಿ ಪಡಿಸಿರುವ ಜೆಟ್‌ಪ್ಯಾಕ್‌ ಅನ್ನ ಆಗ್ರಾದ ಏರ್‌ಬೇಸ್‌ನಲ್ಲಿ ಪರೀಕ್ಷಿಸಲಾಗಿದೆ. ಜೆಟ್‌ಪ್ಯಾಕ್‌ ಅಂದ್ರೆ ಸೂಟ್‌ ರೀತಿಯ ಸಾಧನವಾಗಿದ್ದು, ಅದನ್ನ ಧರಿಸಿದ ನಂತ್ರ ಗಾಳಿಯಲ್ಲಿ ಹಾರಾಟ ನಡೆಸುತ್ತಾ ತೆರಳಬಹುದು. ಈ ಜೆಟ್‌ಪ್ಯಾಕ್‌ ಸಹಾಯದಿಂದ ಪ್ರಕೃತಿ ವಿಕೋಪದಂತ ಸಮಯದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಬಹುದು. ಅಂದ್ಹಾಗೆ ಭಾರತೀಯ ಸೇನೆ ಮೊದಲ ಹಂತದಲ್ಲಿ 48 ಜೆಟ್‌ಪ್ಯಾಕ್‌ಗಳನ್ನ ಖರೀದಿ ಮಾಡೋಕೆ ಕಂಪನಿ ಬಳಿ ಪ್ರಸ್ತಾಪಿಸಿದೆ ಅಂತ ತಿಳಿದು ಬಂದಿದೆ. ಈ ಜೆಟ್‌ಪ್ಯಾಕ್‌ ಖರೀದಿ ಬಗ್ಗೆ ನಾವು ಈ ಹಿಂದೆ ವರದಿ ಮಾಡಿದ್ವಿ. ನಮ್ಮ ಚಾನೆಲ್‌ನಲ್ಲಿ ನೀವದನ್ನ ಚೆಕ್‌ ಮಾಡ್ಬಹುದು.

-masthmagaa.com

Contact Us for Advertisement

Leave a Reply