ಭರ್ಜರಿ ಬೇಟೆ! ಗುಜರಾತ್‌ನಲ್ಲಿ ಅಡಗಿದ್ದ ಸ್ಯಾಂಟ್ರೋರವಿಯನ್ನ ಅರೆಸ್ಟ್‌ ಮಾಡಿದ ಕರ್ನಾಟಕ ಪೊಲೀಸರು!

masthmagaa.com:

ರಾಜ್ಯದಲ್ಲಿ ಕಳೆದ ಕೆಲದಿನಗಳಿಂದ ತೀವ್ರ ಸಂಚಲನ ಹುಟ್ಟಿಸಿದ್ದ ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಬಹುದೊಡ್ಡ ಬೆಳವಣಿಗೆಯಾಗಿದೆ.‌ ತಲೆಮರೆಸಿಕೊಂಡು ಓಡಾಡ್ತಿದ್ದ ಮಂಜುನಾಥ್ ಅಲಿಯಾಸ್‌ ಸ್ಯಾಂಟ್ರೋ ರವಿಯನ್ನ ಖೆಡ್ಡಾಗೆ ಕೆಡುವುವಲ್ಲಿ ಕಡೆಗೂ ಕರ್ನಾಟಕ ಪೊಲೀಸರು ಯಶಸ್ವಿಯಾಗಿದ್ದಾರೆ. ಗುಜರಾತ್‌ನಲ್ಲಿ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನ ಪೊಲೀಸರ ತಂಡ ಬಂಧಿಸಿ ಬೇಡಿ ಹಾಕಿದೆ. ಕಳೆದ 11 ದಿನಗಳಿಂದ ತಪ್ಪಿಸಿಕೊಂಡಿದ್ದ ಈತನನ್ನ ಹುಡುಕೋಕೆ ನಾಲ್ವರು ಎಸ್‌ಪಿಗಳ ವಿಶೇಷ ತಂಡ ರಚಿಸಲಾಗಿತ್ತು. ಈ ಕೇಸ್‌ನಲ್ಲಿ ಘಟಾನುಘಟಿ ನಾಯಕರ ಹಾಗೂ ಅವರ ಕುಟುಂಬಸ್ಥರ ಹೆಸರು ಕೇಳಿ ಬಂದಿತ್ತು. ಸರ್ಕಾರಕ್ಕೂ ಇದು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಖುದ್ದು ಮುಖ್ಯಮಂತ್ರಿಗಳು, ಗೃಹ ಸಚಿವರು ಎಲ್ರೂ ಸಹ ಕೇಸನ್ನ ಸೀರಿಯಸ್‌ ಆಗಿ ತಗೊಂಡಿದ್ರು. ಈಗ ಕೊನೆಗೂ ಆತನನ್ನ ಅರೆಸ್ಟ್‌ ಮಾಡಲಾಗಿದೆ. ತಲೆ ಮರೆಸಿಕೊಂಡಿದ್ದ ಈ 11 ದಿನದಲ್ಲಿ ಈತ ರಾಮನಗರ, ಮಂಡ್ಯ, ಮೈಸೂರು, ಉಡುಪಿ, ಮಂಗಳೂರು, ಕೇರಳ, ಪೂನಾದಲ್ಲಿದ್ದ..ಅದಾದ ನಂತರ ಗುಜರಾತ್‌ಗೆ ಪಲಾಯನ ಮಾಡಿದ್ದ ಅನ್ನೋದು ಗೊತ್ತಾಗಿದೆ. ಆತನ ಆಪ್ತರಿಗೆ ಮೊದಲು ಬಲೆ ಬೀಸಿ, ಅವರನ್ನ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಈತನ ಇರುವಿಕೆ ಬಗ್ಗೆ ಮಾಹಿತಿ ಗೊತ್ತಾಗಿ ಗುಜರಾತ್‌ನ ವಡೋದರದಲ್ಲಿ ಬಂಧಿಸಲಾಗಿದೆ. ಇನ್ನು ಈ ಸ್ಯಾಂಟ್ರೋರವಿ ವಿದೇಶಕ್ಕೆ ಹೋಗ್ತಾನೆ ಅಂತ ಕೂಡ ಹೇಳಲಾಗ್ತಿತ್ತು. ಆದ್ರೆ ಆತನ ಎಲ್ಲಾ ಲೆಕ್ಕಾಚಾರವೂ ತಲೆಕೆಳಗಾಗಿದ್ದು ಕೊನೆಗೂ ರವಿ ಅಡಗಿದ್ದ ಬಿಲವನ್ನ ತೋಡಿ ಪೊಲೀಸರು ಬೇಡಿ ಹಾಕಿ ಎಳ್ಕೊಂಡು ಬಂದಿದ್ದಾರೆ. ಇನ್ನು ಪ್ರಕರಣದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಡಿಜಿಪಿ ಅಲೋಕ್‌ ಕುಮಾರ್‌, ಸ್ಯಾಂಟ್ರೋ ರವಿ ವೈಟ್‌ ಕಾಲರ್‌ ಕ್ರಿಮಿನಲ್‌..ಈ ಹಿಂದೆ 11 ತಿಂಗಳು ಜೈಲು ವಾಸ ಮಾಡಿದ್ದ ಇದುವರೆಗೂ ಸ್ಯಾಂಟ್ರೋ ರವಿ ಸೇರಿ ನಾಲ್ವರನ್ನ ಬಂಧಿಸಲಾಗಿದೆ..ತನಿಖೆ ಮುಂದುವರೆದಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply