ಅಕ್ಕ ತಂಗಿ ನಗರಗಳಾಗಲಿದ್ದಾವೆ UPಯ ನೊಯ್ಡಾ, ಲಾವ್ಡೌನ್‌ ಕಂಟ್ರಿ!

masthmagaa.com:

ಉತ್ತರಪ್ರದೇಶದ ಅಭಿವೃದ್ಧಿ ಪರ್ವಕ್ಕೆ ಇನ್ನೊಂದು ಕಿರೀಟ ಸಿಗೋ ಸಾಧ್ಯತೆ ಎದ್ದು ಕಾಣ್ತಿದೆ. ಗ್ರೇಟರ್‌ ನೋಯ್ಡಾ ನಗರವನ್ನ ಅಮೆರಿಕದ ಲಾವ್ಡೌನ್‌ ಕೌಂಟಿ (Loudoun County) ನಗರದ ಸಿಸ್ಟರ್‌ ಸಿಟಿಯನ್ನಾಗಿ ಮಾಡೋಕೆ ಯುಪಿ-ವರ್ಜಿನಿಯಾ ಅಧಿಕಾರಿಗಳು ಡಿಸೈಡ್‌ ಮಾಡಿವೆ. ಮಂಗಳವಾರ ಲಾವ್ಡೌನ್‌ ಕಂಟ್ರಿಯ ಟೀಮೊಂದು ನ್ಯೊಯ್ಡಾಗೆ ಭೇಟಿ ನೀಡಿತ್ತು. ಅಮೆರಿಕ ರಾಜಧಾನಿ ವಾಷಿಂಗ್‌ಟನ್‌ ಡಿಸಿಯಿಂದ 70 ಕಿಲೋಮೀಟರ್‌ ದೂರದಲ್ಲಿ ಈ ನಗರ ಇದೆ. ಸಿಸ್ಟರ್‌ ಸಿಟಿ ಅಥ್ವಾ ಟ್ವಿನ್‌ ಸಿಟಿ ಅಂತ ಅನೌನ್ಸ್‌ ಮಾಡಿದ್ರೆ, ಉಭಯ ನಗರಗಳ ನಡುವೆ ಶಿಕ್ಷಣ, ಬ್ಯುಸಿನೆಸ್‌, ಕಲ್ಟರ್‌, ಟೆಕ್ನಾಲಜಿ, ವ್ಯವಸಾಯ ಮುಂತಾದ ವಿಷಯಗಳ ಸಂಬಂಧಿತ ಸೌಕರ್ಯಗಳು ಡೈರೆಕ್ಟಾಗಿ ವಿನಿಮಯ ಆಗುತ್ವೆ. ಸೊ ಇದೀಗ ಇವೆರಡು ನಗರಗಳನ್ನ ಸಿಸ್ಟರ್‌ ಸಿಟಿಗಳು ಅಂತ ಘೋಷಣೆ ಮಾಡೋ MOU ರೆಡಿ ಮಾಡೋಕೆ ಉಭಯ ರಾಜ್ಯಗಳ ಅಧಿಕಾರಿಗಳು ಮುಂದಾಗಿದ್ದಾರೆ.

-masthmagaa.com

Contact Us for Advertisement

Leave a Reply