ಗ್ರೀಸ್‌ ರೈಲು ಅಪಘಾತಕ್ಕೆ ರೈಲ್ವೆ ಇಲಾಖೆ ನಿರ್ಲ್ಯಕ್ಷ ಕಾರಣ! ಆಕ್ರೋಶಗೊಂಡ ಜನರಿಂದ ಪ್ರತಿಭಟನೆ!

masthmagaa.com:

ಗ್ರೀಸ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಸಾವನ್ನಪ್ಪಿದವ್ರ ಸಂಖ್ಯೆ 57ಕ್ಕೆ ಏರಿಕೆಯಾಗಿದೆ. ಗಾಯಗೊಂಡ 48 ಜನರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗ್ತಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಘಟನೆಗೆ ಸ್ಟೇಷನ್‌ ಮಾಸ್ಟರ್‌ನ ನಿರ್ಲಕ್ಷ್ಯವೇ ಕಾರಣ ಅಂತ ಆರೋಪಿಸಿ ಆತನನ್ನ ಬಂಧಿಸಲಾಗಿದೆ. ಘಟನಾ ಸ್ಥಳಕ್ಕೆ ಗ್ರೀಸ್‌ ಪ್ರಧಾನಿ ಕಿರಿಯಾಕೊಸ್‌ ಮಿಟ್ಸೊಟಕೀಸ್‌ ಭೇಟಿ ನೀಡಿದ್ದು, ಘಟನೆಗೆ ರೈಲ್ವೆ ಇಲಾಖೆಯ ನಿರ್ಲಕ್ಷ್ಯ ಕಾರಣ ಅಂತ ಆರೋಪಿಸಿದ್ದಾರೆ. ಇತ್ತ ಘಟನೆಯಿಂದ ಕೋಪಗೊಂಡ ಅಲ್ಲಿನ ಜನರು ಅಥೆನ್ಸ್‌ನ ರೈಲ್ವೆ ಆಫೀಸ್‌ ಮೇಲೆ ಕಲ್ಲು ತೂರಾಟ ನಡೆಸೋ ಮೂಲಕ ಪ್ರತಿಭಟನೆ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply