ಕಲಬುರಗಿ ರೈಲ್ವೆ ನಿಲ್ದಾಣಕ್ಕೆ ಹಸಿರು ಬಣ್ಣ: ಹಿಂದೂ ಸಂಘಟನೆಗಳಿಂದ ಆರೋಪ

masthmagaa.com:

ಮೈಸೂರಿಲ್ಲಿ ನಿಲ್ದಾಣವನ್ನ ಗುಂಬಜ್‌ ಮಾದರಿಯಲ್ಲಿ ಕಟ್ಟಲಾಗಿದೆ ಅಂತೇಳಿ ವಿವಾದ ಉಂಟಾಗಿತ್ತು. ಇದೀಗ ಅಂಥದ್ದೇ ವಿವಾದ ಕಲಬುರಗಿಯಲ್ಲಿ ಕೇಳಿ ಬಂದಿದೆ. ಕಲಬುರಗಿ ರೈಲು ನಿಲ್ದಾಣದ ಗೋಡೆಗಳಿಗೆ ಹಸಿರು ಬಣ್ಣವನ್ನ ಪೇಂಟ್‌ ಮಾಡಿರೋದು ಹಿಂದೂಪರ ಸಂಘಟನೆಗಳ ಸಿಟ್ಟಿಗೆ ಕಾರಣವಾಗಿದೆ. ನಿಲ್ದಾಣದ ಮುಖ್ಯ ರಚನೆ ಗುಮ್ಮಟದ ಆಕಾರದಲ್ಲಿದೆ. ಜೊತೆಗೆ ಈಗ ಹಸಿರು ಬಣ್ಣ ಬಳಿದಿರೋ ಕಾರಣ ಮಸೀದಿ ತರ ಕಾಣುತ್ತೆ. ಅದಕ್ಕೆ ಬೇರೆ ಬಣ್ಣ ಹಚ್ಚಬೇಕು ಅಂತ ಹಿಂದೂಪರ ಸಂಘಟನೆಗಳು ಒತ್ತಾಯಿಸಿದ್ವು. ಇದು ತೀವ್ರ ಸ್ವರೂಪ ಪಡೆದುಕೊಳ್ಳೋಕೆ ಮೊದಲೇ ಎಚ್ಚೆತ್ತ ರೈಲ್ವೆ ಇಲಾಖೆ ಹಸಿರು ಬಣ್ಣದ ಮೇಲೆ ಬಿಳಿಯ ಬಣ್ಣವನ್ನ ಹಚ್ಚಿಸಿದೆ.

-masthmagaa.com

Contact Us for Advertisement

Leave a Reply