ಗೃಹಜ್ಯೋತಿ ಆವಾಂತರ: ಹೆಚ್ಚುವರಿ ಬಿಲ್‌ ಕಟ್ಟೋದನ್ನೇ ಮರೆತ ಜನ! ಎಷ್ಟು ಬಿಲ್‌ ಬಾಕಿ?

masthmagaa.com:

ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ನೀಡಿರೋ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ಜುಲೈ ತಿಂಗಳಲ್ಲಿ ಜಾರಿಗೆ ಬಂದಿತ್ತು. ಆದ್ರೆ ಈ ಗ್ಯಾರಂಟಿ ಜಾರಿಯಾದ ಸಂಭ್ರಮದಲ್ಲಿ ಹಲವರು ಹೆಚ್ಚುವರಿ ಕರೆಂಟ್‌ ಬಿಲ್‌ ಕಟ್ಟೋದನ್ನೇ ಮರೆತು ಬಿಟ್ಟಿದ್ದಾರೆ. ಗೃಹಜ್ಯೋತಿ ಜಾರಿಯಾದ ದಿನದಿಂದ, ರಾಜ್ಯದ ಹಲವಾರು ಜನರಿಗೆ ಕರೆಂಟ್‌ ಬಿಲ್‌ ಕಟ್ಟೋದ್ರಿಂದ ಸ್ವಲ್ಪ ರಿಲೀಫ್‌ ಸಿಕ್ಕಿದೆ. ಆದ್ರೆ ಕೆಲವರಿಗೆ ಮಾತ್ರ ಕಾರಣಾಂತರಗಳಿಂದ, ಗೃಹಜ್ಯೋತಿ ಅನ್ವಯಿಸದೇ ಕರೆಂಟ್‌ ಬಿಲ್‌ ಕಟ್ಟಲೇಬೇಕಾದ ಪರಿಸ್ಥಿತಿ ಇದೆ. ಆದ್ರೆ ಫ್ರೀ ವಿದ್ಯುತ್‌ ಖುಷಿಯಲ್ಲಿ, ಹೆಚ್ಚುವರಿ ಬಳಸಿದ ಕರೆಂಟ್‌ ಬಿಲ್‌ ಕಟ್ಟೋದನ್ನೂ ಜನ ಮರೆತಿದ್ದಾರೆ. ಬೆಸ್ಕಾಂ ವ್ಯಾಪ್ತಿಯಲ್ಲಿ 10 ಲಕ್ಷ ಜನರು ಕರೆಂಟ್‌ ಬಿಲ್‌ ಕಟ್ಟದೇ ಹಾಗೇ ಬಾಕಿ ಉಳಿಸಿಕೊಂಡಿದ್ದಾರೆ. ಇವರು ಗೃಹ ಜ್ಯೋತಿ ಯೋಜನೆಯಲ್ಲಿ ನಿಗದಿ ಪಡಿಸಿರೋ ಯುನಿಟ್‌ಗಿಂತ ಹೆಚ್ಚು ಕರೆಂಟ್‌ನ್ನ ಬಳಕೆ ಮಾಡಿದ್ದಾರೆ. ಆದ್ರೆ ಹೆಚ್ಚುವರಿ ಕರೆಂಟ್‌ ಬಿಲ್‌ ಮಾತ್ರ ಕಟ್ಟೇ ಇಲ್ಲ. ಈ 10 ಲಕ್ಷ ಜನರಿಂದ ಬರೋಬ್ಬರಿ 147 ಕೋಟಿ ರೂಪಾಯಿ ಕರೆಂಟ್‌ ಬಿಲ್‌ ಕಟ್ಟೋದಕ್ಕೆ ಬಾಕಿ ಇದೆ. ಅಂದ್ಹಾಗೆ ಕೇವಲ ಬೆಂಗಳೂರು ನಗರದಲ್ಲೇ ಬರೋಬ್ಬರಿ 7.6 ಲಕ್ಷ ಜನರು ಬಿಲ್‌ ಕಟ್ಟೋದು ಬಾಕಿ ಮಾಡಿಕೊಂಡಿದ್ದಾರೆ. ಅಂದ್ರೆ 113 ಕೋಟಿ ಬಿಲ್‌ ಕಟ್ಟಲು ಬಾಕಿ ಇದೆ. ಹಾಗಾಗಿ ಬಿಲ್‌ ಕಟ್ಟದಿದ್ರೆ ಕರೆಂಟ್‌ ಕಡಿತಗೊಳಿಸ್ತೇವೆ ಅಂತ ಬೆಸ್ಕಾಂ ವಾರ್ನಿಂಗ್‌ ನೀಡಿದೆ.

-masthmagaa.com

Contact Us for Advertisement

Leave a Reply