ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಲಿಸ್ಟ್‌ಗೆ ತಾಯಿ ಚಾಮುಂಡೇಶ್ವರಿ ಸೇರ್ಪಡೆ!

masthmagaa.com:

ಕಾಂಗ್ರೆಸ್‌ ನೀಡಿರೋ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ 2,000 ರೂಪಾಯಿ ರಾಜ್ಯದ ಮಹಿಳೆಯರ ಬ್ಯಾಂಕ್‌ ಅಕೌಂಟ್‌ಗೆ ಬಂದು ಬೀಳ್ತಿದೆ. ಇದೀಗ ಈ ಯೋಜನೆಯ ಫಲಾನುಭವಿಗಳಿಗೆ ಗೃಹಲಕ್ಷ್ಮಿಹಣ ಹಾಕುವ ಮುಂಚೆ ತಾಯಿ ಚಾಮುಂಡೇಶ್ವರಿ ದೇವಿಗೆ ಪ್ರತೀ ತಿಂಗಳು 2,000 ರೂಪಾಯಿ ಕಾಣಿಕೆ ನೀಡಬೇಕು ಅಂತ ಸರ್ಕಾರ ಆದೇಶಿಸಿದೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್‌ ಅವ್ರು ಮಹಿಳಾ ಮತ್ತು ಕುಟುಂಬ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವ್ರಿಗೆ ಸೂಚನೆ ನೀಡಿದ್ದಾರೆ. ಅಂದ್ಹಾಗೆ ಈ ಕುರಿತು ಮನವಿ ಸಲ್ಲಿಸಿ ವಿಧಾನ ಪರಿಷತ್ತು ಸದಸ್ಯ ದಿನೇಶ್ ಗೂಳಿಗೌಡ ಅವ್ರು ಡಿಕೆ ಶಿವಕುಮಾರ್‌ ಅವ್ರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ, ʻಚಾಮುಂಡೇಶ್ವರಿ ಸನ್ನಿಧಿಯಲ್ಲಿ ಯೋಜನೆ ಜಾರಿ ಮಾಡೋ ಮೊದಲು ದೇವಿಗೆ ಪೂಜೆ ಸಲ್ಲಿಸಿ 2,000 ರೂಪಾಯಿ ಕಾಣಿಕೆ ಹಾಕಲಾಗಿತ್ತು. ಚಾಮುಂಡೇಶ್ವರಿ ಸನ್ನಿಧಿ ಮೈಸೂರಿನಲ್ಲೇ ಕಾರ್ಯಕ್ರಮಕ್ಕೆ ಚಾಲನೆ ಕೂಡ ನೀಡಲಾಗಿತ್ತು. ಈಗ ಯೋಜನೆ ಯಶಸ್ವಿಯಾಗಿರೋದ್ರಿಂದ ತಾಯಿ ಚಾಮುಂಡೇಶ್ವರಿಗೂ ಪ್ರತಿ ತಿಂಗಳು 2,000 ರೂಪಾಯಿ ಕಾಣಿಕೆ ಹಾಕಬೇಕುʼ ಅಂತ ಮನವಿ ಮಾಡಿದ್ದಾರೆ. ಈ ಕಾರಣದಿಂದ ಡಿಕೆ ಶಿವಕುಮಾರ್‌ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸೂಚನೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply