ಏಪ್ರಿಲ್ ತಿಂಗಳಲ್ಲಿ ದಾಖಲೆಯ ಜಿಎಸ್​ಟಿ ಸಂಗ್ರಹ! ಎಷ್ಟು ಗೊತ್ತಾ?

masthmagaa.com:

ಏಪ್ರಿಲ್ ತಿಂಗಳಲ್ಲಿ ಜಿಎಸ್​ಟಿ ಅಂದ್ರೆ ಸರಕು ಮತ್ತು ಸೇವಾ ತೆರಿಗೆ ಹೊಸ ದಾಖಲೆ ಬರೆದಿದೆ. ಒಂದೇ ತಿಂಗಳಲ್ಲಿ 1.68 ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದೆ. ಜಿಎಸ್​ಟಿ ವ್ಯವಸ್ಥೆಯಡಿ ಈವರೆಗೆ ಸಂಗ್ರಹವಾದ ಅತಿ ಗರಿಷ್ಠ ಮೊತ್ತ ಇದಾಗಿದೆ. ಮಾರ್ಚ್‌ನಲ್ಲಿ ಈ ಆದಾಯ 1.42 ಲಕ್ಷ ಕೋಟಿಯಷ್ಟಿತ್ತು. ಅದನ್ನೇ ಗರಿಷ್ಠ ಅಂತ ಹೇಳಲಾಗಿತ್ತು. ಈ ಸಲ ಆ ದಾಖಲೆ ಕೂಡ ಪುಡಿಯಾಗಿದೆ. ಇನ್ನು ಕಳೆದ ವರ್ಷ ಏಪ್ರಿಲ್‌ನಲ್ಲಿ 1.40 ಲಕ್ಷ ಕೋಟಿ ರೂಪಾಯಿ ಸಂಗ್ರವಾಗಿತ್ತು.

-masthmagaa.com

Contact Us for Advertisement

Leave a Reply