ಗುಜರಾತ್‌ನಲ್ಲಿ ಏಕರೂಪ ನಾಗರಿಕ ಸಂಹಿತೆ (UCC) ಜಾರಿ?

masthmagaa.com:

ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಚುನಾವಣೆ ಮೊದಲೇ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೊಳಿಸೋಕೆ ಗುಜರಾತ್‌ ಸರ್ಕಾರ ಮುಂದಾಗಿದೆ. ಇದರ ಹಿನ್ನಲೆಯಲ್ಲಿ UCC ಜಾರಿ ಕುರಿತು ಎಲ್ಲ ಅಂಶಗಳನ್ನ ಸ್ಟಡಿ ಮಾಡುವ ಸಮಿತಿಯನ್ನ ರಚಿಸೊದಕ್ಕೆ ಪ್ರಸ್ತಾವನೆಯನ್ನ ಇಂದು ಮುಂದಿಟ್ಟಿದೆ. ನಿವೃತ್ತ ಹೈಕೋರ್ಟ್‌ ನ್ಯಾಯಾಧೀಶರ ನೇತೃತ್ವದಲ್ಲಿ ಈ ಸಮಿತಿ ರಚಿಸಲಾಗುತ್ತೆ. ಒಂದ್‌ ವೇಳೆ ಗುಜರಾತ್‌ ಏನಾದ್ರೂ ಈ ಕಾನೂನನ್ನ ಜಾರಿಗೆ ತಂದ್ರೆ UCC ಹೊಂದಿರೋ 2ನೇ ರಾಜ್ಯವಾಗಲಿದೆ. ಈಗಾಗಲೇ ಗೋವಾ ಈ ಏಕರೂಪ ನಾಗರಿಕ ಸಂಹಿತೆಯನ್ನ ಹೊಂದಿದೆ. ಈ ಹಿಂದೆ ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶ UCCಯನ್ನ ಜಾರಿಗೊಳಿಸೋಕೆ ಮುಂದಾಗಿದ್ವು. ಅಂದ್ಹಾಗೆ UCC ಅಂದ್ರೆ ದೇಶದ ಎಲ್ಲ ನಾಗರಿಕರಿಗೂ ಮದುವೆ, ವಿಚ್ಚೇಧನ, ದತ್ತು ಪಡೆದುಕೊಳ್ಳೊದು ಸೇರಿದಂತೆ ಇತರ ಕಾನೂನುಗಳು ಒಂದೇ ಆಗಿರುತ್ವೆ.

-masthmagaa.com

Contact Us for Advertisement

Leave a Reply