ಗುಜರಾತ್‌ ಕಾಂಗ್ರೆಸ್‌ ಶೀಘ್ರದಲ್ಲೇ ಬಿಜೆಪಿ ಜೊತೆ ವಿಲೀನ: ಅರವಿಂದ ಕೇಜ್ರಿವಾಲ್‌

masthmagaa.com:

ಗುಜರಾತ್ ಕಾಂಗ್ರೆಸ್ ಶೀಘ್ರದಲ್ಲೇ ಗುಜರಾತ್ ಬಿಜೆಪಿ ಘಟಕದೊಂದಿಗೆ ವಿಲೀನವಾಗುತ್ತೆ ಅಂತ ಆಮ್‌ ಆದ್ಮಿ ವರಿಷ್ಠ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಭವಿಷ್ಯ ನುಡಿದಿದ್ದಾರೆ. ಚುನಾವಣಾ ಹೊಸ್ತಿಲಲ್ಲಿರೋ ಗುಜರಾತ್‌ಗೆ ಭೇಟಿ ನೀಡಿರೋ ಕೇಜ್ರಿವಾಲ್‌ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು, ಗುಜರಾತ್ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಪ್ರೀತಿ ಉಕ್ಕಿ ಹರಿಯುತ್ತಿದೆ. ಶೀಘ್ರದಲ್ಲಿಯೇ ಆ ಎರಡೂ ಪಕ್ಷದ ರಾಜ್ಯಘಟಕಗಳು ವಿಲೀನವಾಗ್ತವೆ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply