ಚುನಾವಣಾ ಬಾಂಡ್‌ ಖರೀದಿಸಿ ಮೋಸ ಹೋದ ಗುಜರಾತ್‌ ರೈತರು!

masthmagaa.com:

ಚುನಾವಣಾ ಬಾಂಡ್‌ಗಳ ಸಂಬಂಧ ಇತ್ತೀಚೆಗೆ ಸಾಕಷ್ಟು ವಿವಾದಗಳು ಸೃಷ್ಟಿಯಾದ್ವು. ಅದೆಷ್ಟೋ ಅಚ್ಚರಿಯ ಸಂಗತಿಗಳು ಹೊರಬಂದ್ವು. ಇದೀಗ ಇದೇ ಚುನಾವಣಾ ಬಾಂಡ್‌ಗಳ ವಿಚಾರವಾಗಿ ರೈತರು ಮೋಸ ಹೋಗಿ ತಮ್ಮ ಹಣ ಕಳೆದುಕೊಂಡಿದ್ದೀವಿ ಅಂತ ರೈತರು ಹೇಳಿದ್ದಾರೆ. ಗುಜರಾತ್‌ ಮೂಲದ ಆರು ಮಂದಿ ರೈತರು ವೆಲ್ಸ್ಪನ್‌ ಎಂಟರ್‌ಪ್ರೈಸಸ್‌ ಕನ್ಸ್‌ಟ್ರಕ್ಷನ್‌ ಕಂಪನಿಯ ಮಾತಿಗೆ ಮರುಳಾಗಿ ಚುನಾವಣಾ ಬಾಂಡ್‌ಗಳನ್ನ ಖರೀದಿಸಿ 11 ಕೋಟಿ 14 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ. ಚುನಾವಣಾ ಬಾಂಡ್‌ ಅಂದ್ರೇನೇ ಗೊತ್ತಿಲ್ಲದ ಈ ಮುಗ್ದ ರೈತರಿಂದ ವೆಲ್ಸ್ಪನ್‌ ಕಂಪನಿ ತಮ್ಮದೊಂದು ಯೋಜನೆ ಇದೆ ಅಂತೇಳಿ ಈ ರೈತರಿಗೆ ಸೇರಿದ 43,000 ಸ್ಕ್ವೇರ್‌ ಮೀಟರ್‌ ಜಮೀನು ಖರೀದಿ ಮಾಡಿದ್ದಾರೆ. ಇದ್ರಿಂದ ಹಣ ಪಡೆದ ರೈತರಿಗೆ…ಅದನ್ನ ʻಚುನಾವಣಾ ಬಾಂಡ್‌ಗಳ ಮೇಲೆ ಹೂಡಿಕೆ ಮಾಡಿ. ಹೀಗೆ ಮಾಡಿದ್ರೆ ಕೆಲವೇ ವರ್ಷಗಳಲ್ಲಿ ನೀವು ಹೂಡಿಕೆ ಮಾಡಿರೋ ಹಣ 1.5 ಪಟ್ಟು ಜಾಸ್ತಿಯಾಗುತ್ತೆ. ಇಲ್ಲಾಂದ್ರೆ ಬ್ಯಾಂಕ್‌ಗೆ ಡೆಪಾಸಿಟ್‌ ಮಾಡೋಕೆ ಹೋದ್ರೆ… ಆದಾಯ ತೆರಿಗೆ ಇಲಾಖೆಯಿಂದ ಸಮಸ್ಯೆ ಎದುರಿಸ್ಬೇಕಾಗುತ್ತೆ ಅಂತ ಹೆದರಿಸಿದ್ದಾರೆ. ಹೀಗಾಗಿ ಕಂಪನಿಯ ಮಾತಿಗೆ ಮೋಸ ಹೋಗಿ…ಚುನಾವಣಾ ಬಾಂಡ್‌ಗಳ ಬಗ್ಗೆ ತಿಳಿದೇ…ಆರು ಮಂದಿ ರೈತರು ತಮ್ಮ ತಮ್ಮ ಹೆಸರಲ್ಲಿ ಒಟ್ಟು 11 ಕೋಟಿ 14 ಸಾವಿರ ರೂಪಾಯಿ ಮೌಲ್ಯದ ಬಾಂಡ್‌ ಖರೀದಿ ಮಾಡಿದ್ದಾರೆ. ೀತಿಯಾಗಿ ನಮ್ಮನ್ನ ಮೋಸ ಮಾಡಲಾಗಿದೆ ಅಂತ ರೈತರು ಆರೋಪಿಸಿದ್ದಾರೆ. ಇನ್ನು ಇವ್ರು ಖರೀದಿ ಮಾಡಿರೋ ಬಾಂಡ್‌ಗಳ ಪೈಕಿ ಒಟ್ಟು 10 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ ಬಿಜೆಪಿ ಎನ್‌ಕ್ಯಾಶ್‌ ಮಾಡಿದೆ. ಇನ್ನುಳಿದ….1 ಕೋಟಿ 14 ಸಾವಿರ ರೂಪಾಯಿಯ ಬಾಂಡ್‌ನ್ನ ಶಿವ ಸೇನೆ ಪಕ್ಷ ಎನ್‌ಕ್ಯಾಶ್‌ ಮಾಡಿದೆ. ಸದ್ಯ ಈ ಬಗ್ಗೆ ತನಿಖೆ ನಡೀತಿದೆ.

-masthmagaa.com

Contact Us for Advertisement

Leave a Reply