ಚಂದ್ರಯಾನ-3 ಲ್ಯಾಂಡರ್‌ ಮಾಡ್ಯೂಲ್‌ ನಾನೇ ಡಿಸೈನ್‌ ಮಾಡಿದ್ದು ಎಂದಿದ್ದ ನಕಲಿ ವಿಜ್ಞಾನಿ ಬಂಧನ!

masthmagaa.com:

ಚಂದ್ರಯಾನ-3ರ ವಿಕ್ರಮ್‌ ಲ್ಯಾಂಡರ್‌ನ್ನ ತಾನೇ ಡಿಸೈನ್‌ ಮಾಡಿದ್ದು ಅಂತ ಹೇಳ್ಕೊಂಡು ತಿರುಗಾಡ್ತಿದ್ದ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದಾರೆ. ಗುಜರಾತ್‌ನ ಮಿತುಲ್‌ ತ್ರಿವೇದಿ ಅನ್ನೋ ನಕಲಿ ವಿಜ್ಞಾನಿ ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡರ್ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಆದ ಬಳಿಕ ತಾನೇ ಲ್ಯಾಂಡರ್ ಮಾಡ್ಯೂಲ್ ವಿನ್ಯಾಸ ಮಾಡಿರೋದಾಗಿ ಹೇಳಿಕೊಂಡಿದ್ದ. ಆತನ ಸಂದರ್ಶನಗಳು ಸ್ಥಳೀಯ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದನ್ನ ಕಂಡು ದೂರು ನೀಡಲಾಗಿತ್ತು. ಇದೀಗ ಆತನನ್ನ ಬಂಧಿಸಲಾಗಿದೆ. ಸಂಪೂರ್ಣ ತನಿಖೆಯ ಬಳಿಕ, ಈ ವ್ಯಕ್ತಿಗೆ ಇಸ್ರೋದ ಚಂದ್ರಯಾನ- 3 ಯೋಜನೆ ಜತೆ ಯಾವ ರೀತಿಯ ಸಂಪರ್ಕ ಇಲ್ಲ ಮತ್ತು ತಾನು ಇಸ್ರೋ ಉದ್ಯೋಗಿ ಅಂತ ಸುಳ್ಳು ಹೇಳಿಕೊಂಡು ಆತ ಮೋಸ ಮಾಡಿದ್ದಾನೆ ಅನ್ನೋದು ತಿಳಿದು ಬಂದಿದೆ ಅಂತ ಪೊಲೀಸರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply