ಮನೆ ಮೇಲೆ ಮೋದಿ-ಯೋಗಿ ದೇವಸ್ಥಾನ ನಿರ್ಮಿಸಿದ ಗುಜರಿ ವ್ಯಾಪಾರಿ!

masthmagaa.com:

ವ್ಯಕ್ತಿಯೊರ್ವ ತನ್ನ ಮನೆ ಮೇಲೆ ಪ್ರಧಾನಿ ಮೋದಿ ಹಾಗೂ ಯೋಗಿ ದೇವಸ್ಥಾನ ಕಟ್ಟಿರೋ ಇಂಟರೆಸ್ಟಿಂಗ್‌ ವಿಚಾರ ಗುಜರಾತ್‌ನಲ್ಲಿ ಕಂಡು ಬಂದಿದೆ. ಗುಜರಾತ್‌ನ ಭರೂಚ್‌ನಲ್ಲಿ ಮನೆ ಮೇಲೆ ಅಕ್ರಮವಾಗಿ ಹೆಚ್ಚುವರಿ ಮಹಡಿ ಕಟ್ಟಿದ್ದ ಗುಜರಿ ವ್ಯಾಪಾರಿಯೊಬ್ಬ ಈ ಕೆಲಸ ಮಾಡಿದ್ದಾನೆ. ಮೋಹನ್‌ಲಾಲ್‌ ಗುಪ್ತಾ ಅನ್ನೊ ಈತ ಬುಲ್ಡೋಜರ್‌ ಭೀತಿಯಿಂದ ಮನೆ ಮೇಲೆನೆ ದೇವಸ್ಥಾನ ಕಟ್ಟಿದ್ದಾನೆ. ಮೋದಿ-ಯೋಗಿ ಜೊತೆಗೆ ರಾಮ-ಸೀತೆ, ಲಕ್ಷ್ಮಣರ ಮೂರ್ತಿಗಳನ್ನೂ ತನ್ನ ಮನೆ ಮೇಲಿನ ದೇವಸ್ಥಾನದಲ್ಲಿ ಸ್ಥಾಪಿಸಿದ್ದಾನೆ. ಅಧಿಕಾರಿಗಳು ಈ ದೇವಸ್ಥಾನವನ್ನ ನೋಡಿ ಬೆಚ್ಚಿಬಿದ್ದಿದ್ದಾರೆ. ಇಂಟ್ರಸ್ಟಿಂಗ್‌ ವಿಚಾರ ಏನಂದ್ರೆ ಜನವರಿ 22ರಂದು ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯಂದೇ ಈ ದೇವಸ್ಥಾನದ ಉದ್ಘಾಟನೆ ಮಾಡಿದ್ದಾನೆ.

-masthmagaa.com

Contact Us for Advertisement

Leave a Reply