ಗುಜರಾತ್‌ನಲ್ಲಿ ಹೋವರ್‌ಕ್ರಾಪ್ಟ್‌ ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ!

masthmagaa.com:

ಗುಜರಾತ್‌ನಲ್ಲಿ ಇಂಡಿಯನ್ ಕೋಸ್ಟ್‌ ಗಾರ್ಡ್‌‌, ಹೋವರ್‌ಕ್ರಾಪ್ಟ್‌ ನಿರ್ವಹಣೆ ಘಟಕ ನಿರ್ಮಾಣ ಮಾಡೋಕೆ ಮುಂದಾಗಿದೆ. ಹೋವರ್‌ಕ್ರಾಫ್ಟ್‌ ಅಂದ್ರೆ ಗಾಳಿಯ ಬ್ಲೋವರ್‌ಗಳ ಸಹಾಯದಿಂದ, ಅಂದ್ರೆ ಒಂದ್‌ ರೀತಿಯ ಫ್ಯಾನ್‌ನ ಗಾಳಿಯ ಸಹಾಯದಿಂದ ಚಲಿಸೋ ಹಡಗುಗಳು. ನೆಲ ಹಾಗೂ ಐಸ್‌ ಮೇಲೆ ಚಲಿಸೋ ಹೋವರ್‌ಕ್ರಾಫ್ಟ್‌ಗಳೂ ಇವೆ. ಆದ್ರೆ ಸದ್ಯ ಕೋಸ್ಟ್‌ ಗಾರ್ಡ್‌, ದ್ವಾರಕ ಜಿಲ್ಲೆಯ ಓಖಾ ಬಳಿ ಹೋವರ್‌ಕ್ರಾಫ್ಟ್‌ ಬೋಟ್‌ಗಳ ಮೇಂಟೆನೆನ್ಸ್‌ ಯೂನಿಟ್‌ ನಿರ್ಮಾಣ ಮಾಡೋಕೆ ಮುಂದಾಗಿದೆ. ಗುರುವಾರ ಈ ಯೂನಿಟ್‌ಗೆ ಶಂಕುಸ್ಥಾಪನೆ ಆಗಲಿದೆ.

-masthmagaa.com

Contact Us for Advertisement

Leave a Reply