ಐಸ್​ ಕ್ರೀಮ್​​ಗೂ ಬಂತು ಹಲಾಲ್​​ ವಿವಾದ!

masthmagaa.com:

ಹಲಾಲ್​​​ ಕಿಚ್ಚು ಈಗ ಐಸ್​ಕ್ರೀಂಗೂ ಹರಡಿಕೊಂಡಿದೆ. ಮಂಗಳೂರಿನಲ್ಲಿ ಹಲವು ವರ್ಷಗಳ ಹಿಂದೆ ಹಲಾಲ್​​ ಸೆರ್ಟಿಫಿಕೇಟ್ ಪಡೆದುಕೊಂಡಿದ್ದ ಐಸ್​​ಕ್ರೀಂ ಒಂದನ್ನು ಬಹಿಷ್ಕರಿಸುವಂತೆ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಜೋರಾಗಿದೆ. ಈ ಐಸ್​ಕ್ರೀಂ ತಿನ್ನಬಾರದು ಅಂತ ಎಚ್ಚರಿಸಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಆ ಐಸ್​ಕ್ರೀಂ ಕಂಪನಿ, ನಮ್ಮ ಸಂಸ್ಥೆಯ ಹೆಸರು ಹಾಳು ಮಾಡೋಕೆ ಹೀಗೆ ಮಾಡಲಾಗ್ಇತದೆ. ಹಲಾಲ್ ಕೇವಲ ಮಾಂಸಕ್ಕೆ ಸಂಬಂಧಿಸಿದ್ದಲ್ಲ. ಬದಲಿಗೆ ಹಲಾಲ್ ಅಂದ್ರೆ ತಿನ್ನಲು ಯೋಗ್ಯವಾಗಿದ್ದು ಅಂತ ಅರ್ಥ ಅಷ್ಟೆ ಅಂತ ಹೇಳಿಕೊಂಡಿದೆ. ಇದ್ರ ಬೆನ್ನಲ್ಲೇ ಮುಸ್ಲಿಂ ವ್ಯಾಪಾರಿಗಳ ಗುಂಪೊಂದು ಮೈಸೂರಿನಲ್ಲಿ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ ಸದಸ್ಯೆ ರಿಂಚೆನ್ ಲಾಮೋ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ನಮ್ಮನ್ನು ಟಾರ್ಗೆಟ್ ಮಾಡಲಾಗ್ತಿದೆ ಅಂತ ದೂರು ನೀಡಿದ್ದಾರೆ. ಹಿಜಬ್, ಹಲಾಲ್​​ ಮತ್ತು ಲೌಡ್​ಸ್ಪೀಕರ್ ವಿವಾದವನ್ನು ಕೂಡ ಉಲ್ಲೇಖಿಸಿದ್ದಾರೆ ಅಂತ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply