ಹಮಾಸ್‌ ದಾಳಿಯನ್ನು ʻಹೋಲೋಕಾಸ್ಟ್‌ʼಗೆ ಹೋಲಿಸಿದ ಜೋ ಬೈಡನ್‌!

masthmagaa.com:

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಇಸ್ರೇಲ್‌ ಮೇಲೆ ದಾಳಿ ಮಾಡಿರೋ ಹಮಾಸ್‌ ಉಗ್ರರನ್ನ ಹೇಡಿಗಳ ಗುಂಪು ಅಂತ ಕರೆದಿದ್ದಾರೆ. ಇಂಟರ್‌ವ್ಯೂ ಒಂದರಲ್ಲಿ ಮಾತನಾಡಿರುವ ಬೈಡನ್‌, ಅನಾಗರಿಕತೆ ಹಾದಿ ತುಳಿದಿರುವ ಹಮಾಸ್‌ ಉಗ್ರರ ದಾಳಿಯಲ್ಲಿ ಮೃತಪಟ್ಟಿರೋ ಇಸ್ರೇಲ್‌ ಜನರು ಹಾಗೂ ಇಸ್ರೇಲ್‌ನ ಪ್ರತಿದಾಳಿಗೂ ಪ್ರಮುಖವಾದ ವ್ಯತ್ಯಾಸವಿದೆ ಅಂತ ಹೇಳಿದ್ದಾರೆ. ಹಮಾಸ್‌ ದಾಳಿ ʻಹೋಲೋಕಾಸ್ಟ್‌ʼ ಮಾದರಿಯಲ್ಲಿದೆ. ಅಂದ್ರೆ, 2ನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನ್‌ನ ನಾಜಿ ಪಾರ್ಟಿಯಿಂದ ಹತ್ಯೆಗೊಂಡ ಕೋಟಿಗಟ್ಟಲೆ ಯಹೂದಿಗಳ ಭೀಕರ ನರಮೇಧವಿದು. ಇಂಥದೊಂದು ಬಹುದೊಡ್ಡ ಹತ್ಯಕಾಂಡಕ್ಕೆ ಹಮಾಸ್‌ ಉಗ್ರರನ್ನು ಜೋ ಬೈಡನ್‌ ಹೋಲಿಸಿದ್ದಾರೆ. ನಾಗರಿಕರ ಹಿಂದೆ ಅವಿತುಕೊಂಡಿರುವ ಹೇಡಿಗಳ ಗುಂಪು ಅಂತಲೂ ಬೈಡನ್‌ ಕರೆದಿದ್ದಾರೆ.

-masthmagaa.com

Contact Us for Advertisement

Leave a Reply