ಇಸ್ರೇಲ್ ಯುದ್ಧಕ್ಕೆ ಪಾಕಿಸ್ತಾನ! ಪಾಕ್‌ ಸೇನೆಗೆ ಹಮಾಸ್ ಆಹ್ವಾನ!

masthmagaa.com:

ಹಮಾಸ್‌ ಹಾಗೂ ಇಸ್ರೇಲ್‌ ನಡುವಿನ ಯುದ್ದದಲ್ಲಿ ಮತ್ತೊಂದು ಬೆಳವಣಿಗೆಯಾಗಿದೆ. ತೀವ್ರಗೊಳ್ತಿರೋ ಇಸ್ರೇಲ್‌ ದಾಳಿಯನ್ನ ಎದುರಿಸೋಕೆ ಹಮಾಸ್‌ಗಳು ಈಗ ಸೋ ಕಾಲ್ಡ್‌ ಮುಸ್ಲಿಂ ದೇಶಗಳ ರಕ್ಷಕ ಪಾಕ್‌ ಸಹಾಯ ಕೋರಿದ್ದಾರೆ. ಹಮಾಸ್‌ ಸಂಘಟನೆಯ ಪೊಲಿಟಿಕಲ್‌ ವಿಂಗ್‌ನ ಮುಖ್ಯಸ್ಥ ಇಸ್ಮಾಯಿಲ್‌ ಹನಿಯೇ ಪಾಕಿಸ್ತಾನಕ್ಕೆ ಹೋಗಿದ್ದು ಅಲ್ಲಿ ಪಾಕ್‌ ಸೇನೆಯನ್ನ ಹೊಗಳಿ ಅಟ್ಟಕ್ಕೇರಿಸಿದ್ದಾನೆ. ʻʻಪಾಕಿಸ್ತಾನ ಸೇನೆ ಅತ್ಯಂತ ಶೂರ ಸೇನೆ, ಹೀಗಾಗಿ ಪಾಕಿಸ್ತಾನ ಇಸ್ರೇಲ್‌ ಸೇನೆಯನ್ನ ಚೂರು ಬೆದರಿಸಬೇಕು. ಆಗ ಇಸ್ರೇಲ್‌ನ ಕ್ರೌರ್ಯ ಮತ್ತು ಅಪರಾಧಗಳು ನಿಲ್ಲಬಹುದು ಅಂತ ಮನವಿ ಮಾಡಿದ್ದಾನೆ. ಜೊತೆಗೆ ಪಾಕ್‌ ಅನ್ನೋದು ಸಾಮಾನ್ಯ ನೆಲ ಅಲ್ಲ. ಅದು ಮುಜಾಹಿದ್ದೀನ್‌ಗಳ ಭೂಮಿ ಅಂದ್ರೆ ಇಸ್ಲಾಂಗಾಗಿ ಹೋರಾಟ ಮಾಡಿದವ್ರ ಭೂಮಿ ಅಂತ ಕರೆದಿದ್ದಾನೆ. ಅಷ್ಟೇ ಅಲ್ಲ ಪಾಕಿಸ್ತಾನಕ್ಕೆ ದೊಡ್ಡ ಶಕ್ತಿ ಇದೆ. ಆ ಶಕ್ತಿಯಿಂದಲೇ ಈ ಸಂಘರ್ಷವನ್ನು ಸಮರ್ಥವಾಗಿ ನಿಲ್ಲಿಸಬಹುದು ಅಂತ ಹೇಳಿದ್ದಾನೆ. ಇಸ್ಲಾಮಾಬಾದ್‌ನಲ್ಲಿ ನಡೆದ ʻಅಲ್-ಅಕ್ಸಾ ಮಸೀದಿಯ ಪವಿತ್ರತೆ ಮತ್ತು ಮುಸ್ಲಿಂ ಉಮ್ಮಾದ ಜವಾಬ್ದಾರಿʼ ಅನ್ನೋ ಕಾರ್ಯಕ್ರಮದಲ್ಲಿ ಹನಿಯೇ ಈ ಹೇಳಿಕೆ ನೀಡಿದ್ದಾನೆ.

-masthmagaa.com

Contact Us for Advertisement

Leave a Reply