ಕದನ ವಿರಾಮ ಮುಗಿದಮೇಲೆ ಮತ್ತೆ ದಾಳಿ ಮಾಡ್ತೀವಿ: ನೆತನ್ಯಾಹು

masthmagaa.com:

ಇಸ್ರೇಲ್‌-ಹಮಾಸ್‌ ಯುದ್ಧದ ತಾತ್ಕಾಲಿಕ ಕದನ ವಿರಾಮದಲ್ಲಿ ಮೂರು ಹಂತಗಳಲ್ಲಿ ಒತ್ತೆಯಾಳುಗಳನ್ನ ಬಿಡುಗಡೆ ಮಾಡಲಾಗಿದೆ. ಇದೀಗ ಇನ್ನಷ್ಟು ಪ್ಯಾಲಸ್ತೀನ್‌ ಕೈದಿಗಳನ್ನು ಇಸ್ರೇಲ್‌ ಜೈಲುಗಳಿಂದ ಬಿಡುಗಡೆಗೊಳಿಸೊ ನಿಟ್ಟಿನಲ್ಲಿ ಕದನ ವಿರಾಮ ಮುಂದುವರೆಸಬೇಕು ಅಂತ ಹಮಾಸ್‌ ಕೇಳಿಕೊಂಡಿದೆ. ಮೂರನೇ ಸುತ್ತಿನಲ್ಲಿ ಹಮಾಸ್‌ ನಿನ್ನೆ ನಾಲ್ಕು ವರ್ಷದ ಅಮೆರಿಕನ್‌ ಬಾಲಕಿ ಸೇರಿ 17 ಒತ್ತೆಯಾಳುಗಳನ್ನ ರಿಲೀಸ್‌ ಮಾಡಿದೆ. ಒಟ್ಟಾರೆಯಾಗಿ ಮೂರು ದಿನಗಳಲ್ಲಿ 63 ಜನರನ್ನ ಹಮಾಸ್‌ ರಿಲೀಸ್‌ ಮಾಡಿದೆ. ಇದಕ್ಕೆ ಬದಲಾಗಿ ನಿನ್ನೆ 39 ಪ್ಯಾಲಸ್ತೀನಿಯರನ್ನ ಇಸ್ರೇಲ್‌ ಬಿಡುಗಡೆ ಮಾಡಿದೆ. ಅಲ್ಲದೆ ಕದನ ವಿರಾಮ ವಿಸ್ತರಿಸೋ ಕುರಿತು ಇಸ್ರೇಲ್‌ ಗುಪ್ತಚರ ಸಂಸ್ಥೆ ಮೊಸಾದ್‌ ಹಾಗೂ ಮಧ್ಯವರ್ತಿ ಕತಾರ್‌ನ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದೆ ಅಂತ ಇಸ್ರೇಲ್‌ ಹೇಳಿದೆ. ಇತ್ತ ಯುದ್ಧ ಶುರುವಾದ್ಮೇಲೆ ಇದೇ ಮೊದಲ ಬಾರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಯುದ್ಧಪೀಡಿತ ಗಾಜಾ ಪಟ್ಟಿಗೆ ಭೇಟಿ ಕೊಟ್ಟಿದ್ದಾರೆ. ಗಾಜಾದಲ್ಲಿರೊ ಇಸ್ರೇಲಿ ಸೈನಿಕರಿಗೆ ಮೆಸೇಜ್‌ ನೀಡಿರೋ ನೆತನ್ಯಾಹು “ಗೆಲುವು ಸಾಧಿಸೊವರೆಗೂ ದಾಳಿ ಮುಂದುವರೆಸೋಣ. ನಮ್ಮನ್ನ ಯಾರೂ ತಡೆಯೋರಿಲ್ಲ. ನಮ್ಮ ಬಳಿ ಗೆಲ್ಲುವ ಶಕ್ತಿ ಇದೆ. ನಮ್ಮ ಎಲ್ಲಾ ವಾರ್‌ ಗೋಲ್‌ಗಳನ್ನ ನಾವು ಸಾಧಿಸೋಣ” ಅಂತೇಳಿ ಹುರಿದುಂಬಿಸಿದ್ದಾರೆ. ಅಲ್ಲದೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಜೊತೆ ಫೋನ್‌ ಕಾಲ್‌ನಲ್ಲಿ ಮಾತನಾಡಿದ ನೆತನ್ಯಾಹು “ಕದನ ವಿರಾಮ ಮುಗಿಯುತ್ತಿದ್ದಂತೆ ಮತ್ತೊಮ್ಮೆ ಫುಲ್‌ ಸ್ಕೇಲ್‌ನಲ್ಲಿ ಗಾಜಾ ಪಟ್ಟಿಯಲ್ಲಿ ಕಾರ್ಯಾಚರಣೆ ನಡೆಸುತ್ತೇವೆ” ಅಂತ ಗುಡುಗಿದ್ದಾರೆ. ಆದ್ರೆ ಅಧ್ಯಕ್ಷ ಜೋ ಬೈಡೆನ್‌, ಹಾಸ್ಟೇಜಸ್‌ಗಳ ಹೆಚ್ಚುವರಿ ರಿಲೀಸ್‌ಗಾಗಿ ಕದನ ವಿರಾಮವನ್ನ ಮುಂದುವರೆಸುವಂತೆ ಕರೆ ಕೊಟ್ಟಿದ್ದಾರೆ. ಇದೇ ವೇಳೆ ಇಸ್ರೇಲ್-‌ಪ್ಯಾಲಸ್ತೀನ್‌ ಬಿಕ್ಕಟ್ಟಿಗೆ two-state solution ಅಥ್ವಾ ಎರಡು ದೇಶಗಳ ಪರಿಹಾರ ಮಾರ್ಗವನ್ನ ಬೈಡೆನ್ ಸೂಚಿಸಿದ್ದಾರೆ. ಇತ್ತ antisemitism ಅಥ್ವಾ ಯಹೂದಿ ವಿರೋಧಿ ಪೋಸ್ಟ್‌ ಒಂದಕ್ಕೆ ರಿಪ್ಲೈ ಮಾಡಿ ಟೀಕೆಗೆ ಒಳಗಾಗಿದ್ದ ಟೆಸ್ಲಾ ಸಿಎಒ ಎಲಾನ್‌ ಮಸ್ಕ್‌ ಬಗ್ಗೆ ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ಮಾತಾಡಿದ್ದಾರೆ. ಇಂಟರ್‌ವ್ಯೂ ಒಂದ್ರಲ್ಲಿ ಈ ಬಗ್ಗೆ ಕೇಳಿದಾಗ‌, “ನಾನು antisemitismನ್ನ ವಿರೋಧಿಸ್ತೇನೆ. ಅದು ಎಲಾನ್‌ ಮಸ್ಕ್‌ ಆದ್ರೂ ಸರಿ. ಬೀದಿಯಲ್ಲಿ ಹೋಗ್ತಿರೋ ಸಾಮಾನ್ಯ ವ್ಯಕ್ತಿಯಾದ್ರು ಸರಿ. ಯಾವುದೇ ಸಮುದಾಯದ ವಿರುದ್ದ ಹೇಳಿಕೆ ನೀಡೋದನ್ನ ನಾನು ಒಪ್ಪಲ್ಲ” ಅಂತ ಸುನಾಕ್‌ ಹೇಳಿದ್ದಾರೆ. ಅತ್ತ ಸಿರಿಯಾ ಮೇಲೆ ಇಸ್ರೇಲ್‌ ನಡೆಸಿದ ಏರ್‌ ಸ್ಟ್ರೈಕ್‌ನಲ್ಲಿ ಸಿರಿಯಾ ರಾಜಧಾನಿ ಡಮಾಸ್ಕಸ್‌ ಏರ್‌ಪೋರ್ಟ್‌ನ ರನ್‌ವೇಗೆ ಹಾನಿಯಾಗಿದ್ದು, ವಿಮಾನ ಹಾರಾಟ ಸ್ಥಗಿತಗೊಂಡಿದೆ. ಅಲ್ಲದೆ ಅಲ್ಲಿನ ಮಜ್ಜೇಹ್‌ ಮಿಲಿಟರಿ ಏರ್‌ಪೋರ್ಟ್‌ಗೂ ಹಾನಿಯಾಗಿದೆ ಅಂತ ತಿಳಿದುಬಂದಿದೆ. ಈ ದಾಳಿಯ ಬಗ್ಗೆ ಇಸ್ರೇಲ್‌ ಯಾವುದೇ ಕಮೆಂಟ್‌ ಮಾಡಿಲ್ಲ.

-masthmagaa.com

Contact Us for Advertisement

Leave a Reply