ಗಾಜಾ ಕದನ ವಿರಾಮ ಪ್ರಸ್ತಾಪವನ್ನ ರಿಜೆಕ್ಟ್‌ ಮಾಡಿದ ಹಮಾಸ್!

masthmagaa.com:

ಗಾಜಾ ಕದನ ವಿರಾಮ ಪ್ರಸ್ತಾಪವನ್ನ ಒಪ್ಕೊಳ್ಳಲು ಒಂದು ವಾರ ಟೈಮ್‌ ಕೊಟ್ಟಿದ್ದ ಇಸ್ರೇಲ್‌ನ ಪ್ರಸ್ತಾಪವನ್ನ ಇದೀಗ ಹಮಾಸ್‌ ರಿಜೆಕ್ಟ್‌ ಮಾಡಿದೆ. ಯುದ್ದವನ್ನ ಕೊನೆಗೊಳಿಸದೇ ಇರೋ ಯಾವುದೇ ಕದನ ವಿರಾಮ ಪ್ರಸ್ತಾಪವನ್ನು ನಾವು ಒಪ್ಪೋದಿಲ್ಲ ಅಂತ ಹಮಾಸ್‌ ಅಧಿಕಾರಿಗಳು ಹೇಳಿದ್ದಾರೆ. ಅಂದ್ರೆ ಗಾಜಾದಲ್ಲಿ ಸಂಪೂರ್ಣವಾಗಿ ಯುದ್ದ ನಿಲ್ಲಬೇಕು, ಇಸ್ರೇಲ್‌ ಪಡೆ ತನ್ನ ಸೇನೆಯನ್ನ ಗಾಜಾದಿಂದ ವಾಪಸ್‌ ಹಿಂತೆಗೆದುಕೊಳ್ಳಬೇಕು. ಅಂತಹ ಒಪ್ಪಂದಕ್ಕೆ ಮಾತ್ರ ನಾವು ಒಪ್ಪಿಗೆ ಸೂಚಿಸ್ತೇವೆ ಅಂತ ಹಮಾಸ್‌ ಹೇಳಿದೆ. ಇನ್ನು ಗಾಜಾದ ರಫಾ ನಗರದಲ್ಲಿ ಪ್ರಬಲ ದಾಳಿ ನಡೆಸ್ತಿರೊ ಇಸ್ರೇಲ್‌ ಏರ್‌ಸ್ಟ್ರೈಕ್‌ನಲ್ಲಿ ಇಸ್ಲಾಮಿಕ್‌ ಜಿಹಾದ್‌ ರಫಾ ಬ್ರಿಗೇಡ್‌ನ ಹಿರಿಯ ಅಧಿಕಾರಿ ಐಮನ್‌ ಝರಾಬ್‌ ಸಾವನ್ನಪ್ಪಿದ್ದಾನೆ ಅಂತ ಇಸ್ರೇಲ್‌ ಹೇಳಿದೆ. ಅಂದ್ಹಾಗೆ ಅಕ್ಟೊಬರ್‌ 7ರ ಇಸ್ರೇಲ್‌ ದಾಳಿ ವಿಚಾರವಾಗಿ ಈತ ಇಸ್ಲಾಮಿಕ್‌ ಪಡೆಗಳಿಗೆ ನಿರ್ದೇಶನ ನೀಡ್ತಿದ್ದ ಅಂತೇಳಲಾಗಿದೆ.

-masthmagaa.com

Contact Us for Advertisement

Leave a Reply