ರಾಜಕೀಯಕ್ಕೆ ಸೋನಿಯಾ ಗಾಂಧಿ ಗುಡ್‌ ಬೈ? ಕಾಂಗ್ರೆಸ್‌ ಸಮಾವೇಶದಲ್ಲಿ ಮಹತ್ವದ ಹೇಳಿಕೆ!

masthmagaa.com:

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ರಾಜಕೀಯವಾಗಿ ನಿವೃತ್ತಿ ಘೋಷಿಸೋ ಸುಳಿವು ಕೊಟ್ಟಿದ್ದಾರೆ. ಛತ್ತೀಸಗಢ ರಾಯಪುರದಲ್ಲಿ ಕಾಂಗ್ರೆಸ್‌ ಮೂರುದಿನಗಳ ಸಮಾವೇಶ ನಡೆಸ್ತಿದ್ದುಈ ವೇಳೆ ಮಾತನಾಡಿದ ಸೋನಿಯಾ, ಮನಮೋಹನ್ ಸಿಂಗ್ ಅವರ ನಾಯಕತ್ವದಲ್ಲಿ 2004 ಮತ್ತು 2009ರಲ್ಲಿನ ನಮ್ಮ ಗೆಲುವು ನನಗೆ ವೈಯಕ್ತಿಕವಾಗಿ ತೃಪ್ತಿ ನೀಡಿವೆ. ಆದರೆ ನನಗೆ ಹೆಚ್ಚು ಸಂತೋಷ ಕೊಟ್ಟಿರೋದು ಭಾರತ್ ಜೋಡೋ ಯಾತ್ರೆ ಜೊತೆಗೆ ನನ್ನ ಇನ್ನಿಂಗ್ಸ್ ಕೂಡ ಮುಕ್ತಾಯಗೊಳ್ಳುವ ಸಾಧ್ಯತೆ ಇರೋದು ಅಂತ ಹೇಳಿದ್ದಾರೆ. ಈ ಮೂಲಕ ರಾಜಕೀಯದಿಂದ ದೂರಾಗುವ ರೀತಿ ಮಾತನಾಡಿದ್ದಾರೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ಇರೋ ಹೊತ್ತಲ್ಲೇ ಸೋನಿಯಾ ಗಾಂಧಿಯವರ ಈ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಇನ್ನು ಇದೇ ವೇಳೆ ಮಾತನಾಡಿದ ಸೋನಿಯಾ ಗಾಂಧಿ, ಮೋದಿ ಹಾಗೂ ಬಿಜೆಪಿ ಎಲ್ಲಾ ಸಂಸ್ಥೆಗಳನ್ನ ತನ್ನ ಕಂಟ್ರೋಲ್‌ನಲ್ಲಿ ಇಟ್ಟುಕೊಂಡಿದ್ದಾರೆ. ಇದು ಕಾಂಗ್ರೆಸ್ ಮತ್ತು ದೇಶಕ್ಕೆ ಸವಾಲಿನ ಸಮಯ ಅಂತ ಹೇಳಿದ್ದಾರೆ. ಇನ್ನು ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷದ ಸಂವಿಧಾನಕ್ಕೆ ಕೆಲ ಹೊಸ ನಿಯಮಗಳು ಸಹ ಸೇರಿಕೊಂಡಿವೆ. ಕಾಂಗ್ರೆಸ್ ಸದಸ್ಯರು ಮಾದಕವಸ್ತುಗಳಿಂದ ದೂರ ಇರಬೇಕು ಮತ್ತು ಸಾರ್ವಜನಿಕವಾಗಿ ಪಕ್ಷವನ್ನು ಟೀಕಿಸಬಾರದು ಅನ್ನೋದನ್ನ ಸೇರಿಸಲಾಗಿದೆ. ಜೊತೆಗೆ Congress Working Committee (CWC)ಯಲ್ಲಿ ಪರಿಶಿಷ್ಟ ಸಮುದಾಯಗಳಿಗೆ, ಮಹಿಳೆಯರಿಗೆ, ಹಿಂದುಳಿದ ವರ್ಗದವರಿಗೆ, ಹಾಗೂ ಅಲ್ಪಸಂಖ್ಯಾತರಿಗೆ ಶೇ50ರಷ್ಟು ಮೀಸಲಾತಿ ನೀಡೋದಕ್ಕೆ ಕೂಡ ಅವಕಾಶ ಮಾಡಿಕೊಡಲಾಗಿದೆ.

-masthmagaa.com

Contact Us for Advertisement

Leave a Reply