ರಾಜ್ಯಾದ್ಯಾಂತ ʻನಮ್ಮ ಕ್ಲಿನಿಕ್‌ʼ ಶುಭಾರಂಭ! ಈ ಕ್ಲಿನಿಕ್‌ಗಳ ವಿಶೇಷತೆಯೇನು?

masthmagaa.com:

ರಾಜ್ಯದಲ್ಲಿ ʻನಮ್ಮ ಕ್ಲಿನಿಕ್‌ʼಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಇಂದು ಹುಬ್ಬಳ್ಳಿಯಲ್ಲಿ ಚಾಲನೆ ನೀಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 114 ನಮ್ಮ ಕ್ಲಿನಿಕ್‌ಗಳು ಏಕಕಾಲಕ್ಕೆ ಕಾರ್ಯರಂಭಗೊಂಡಿವೆ. ರಾಜ್ಯದ ಜನರ ಆರೋಗ್ಯ ರಕ್ಷಣೆಗೆ ನಮ್ಮ ಸರ್ಕಾರ ಬದ್ದವಾಗಿದೆ. ಬಡವರಿಗೆ ಅನುಕೂಲವಾಗಲು ನಮ್ಮ ಕ್ಲಿನಿಕ್‌ ತೆರೆಯಲಾಗ್ತಿದೆ. ಜನವರಿ ಅಂತ್ಯದೊಳಗೆ ರಾಜ್ಯದಲ್ಲಿ 437 ನಮ್ಮ ಕ್ಲಿನಿಕ್‌ ಆರಂಭ ಮಾಡಲಾಗುತ್ತೆ ಅಂತ ಬೊಮ್ಮಾಯಿ ಹೇಳಿದ್ದಾರೆ. ಇನ್ನು ದುರ್ಬಲ ವರ್ಗಗಳಿಗೆ ಸುಲಭವಾಗಿ ವೈದ್ಯಕೀಯ ಸೇವೆ ದೊರಕಿಸೊ ದೃಷ್ಟಿಯಿಂದ ಈ ಕ್ಲಿನಿಕ್‌ಗಳನ್ನ ಆರಂಭಿಸಲಾಗಿದೆ. ಅಂದ್ಹಾಗೆ ನಮ್ಮ ಕ್ಲಿನಿಕ್‌ಗಳಲ್ಲಿ ಒಟ್ಟು 12 ರೀತಿಯ ವೈದ್ಯಕೀಯ ಸೇವೆಗಳು ಲಭ್ಯವಿದೆ. ಗರ್ಭಿಣಿಯರ ತಪಾಸಣೆ ಮತ್ತು ಆರೈಕೆ, ನವಜಾತ ಶಿಶುಗಳ ಆರೈಕೆ, ಶಿಶುಗಳಿಗೆ ಚಿಕಿತ್ಸೆ, ಲಸಿಕೆ ಸೇವೆ, ಕುಟುಂಬ ನಿಯಂತ್ರಣ, ಸಕ್ಕರೆ ಕಾಯಿಲೆ, ರಕ್ತದೊತ್ತಡ ನಿರ್ವಹಣೆಯಂತ ಹಲವಾರು ಸೇವೆಗಳನ್ನ ಪಡೆಯಬಹುದು. ಪ್ರತಿ ನಮ್ಮ ಕ್ಲಿನಿಕ್‌ನಲ್ಲಿ ವೈದ್ಯಕೀಯ ಅಧಿಕಾರಿ, ನರ್ಸ್, ಲ್ಯಾಬ್ ಟೆಕ್ನೀಷಿಯನ್ ಮತ್ತು ಗ್ರೂಪ್ ಡಿ ನೌಕರರು ಇರ್ತಾರೆ.

-masthmagaa.com

Contact Us for Advertisement

Leave a Reply