ದೇಶ ಬಿಟ್ಟು ಹೋಗ್ತಿರೋ ಆಟೋ ಮೊಬೈಲ್ ಬ್ರಾಂಡ್ಸ್! ಮೋದಿ ವಿರುದ್ದ ರಾಹುಲ್‌ ಕೆಂಡ!

masthmagaa.com:

ಮೋದಿ ಜೀ ದೇಶದಲ್ಲಿ ಹೇಟ್‌ ಇನ್‌ ಇಂಡಿಯಾ, ಮೇಕ್‌ ಇನ್‌ ಇಂಡಿಯಾ ಎರಡೂ ಒಂದೇಯಾಗಿರೋಕೆ ಸಾದ್ಯವಿಲ್ಲ ಅಂತ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಜಪಾನ್‌ ಮೂಲದ ಆಟೋಮೊಬೈಲ್‌ ಕಂಪನಿ ನಿಸಾನ್‌ ಡಟ್ಸನ್‌ ಭಾರತದಲ್ಲಿ ತಾನು ಕಾರುಗಳನ್ನ ಉತ್ಪಾದನೆ ಮಾಡೋದಿಲ್ಲ ಅಂತ ಹೇಳಿದೆ. ಈ ಬೆನ್ನಲ್ಲೇ ಈಗ ಟ್ವೀಟ್‌ ಮೂಲಕ ಕೆಂಡ ಉಗುಳಿರೋ ರಾಹುಲ್‌, ಕಳೆದ ಕೆಲ ವರ್ಷಗಳಿಂದ ಯುನೈಟೈಡ್‌ ಮೋಟರ್‌, ಹಾರ್ಲೀ ಡೇವಿಡ್‌ಸನ್‌, ಮ್ಯಾನ್‌ ಟ್ರಕ್‌ ಸೇರಿದಂತೆ 7 ಪ್ರಸಿದ್ದ ಬ್ರಾಂಡ್‌ಗಳು ಭಾರತದಲ್ಲಿ ಉತ್ಪಾದನೆಯನ್ನ ಬಂದ್‌ ಮಾಡಿ ಸಮಾಧಾನದಿಂದ ದೇಶ ಬಿಟ್ಟು ಹೋಗಿವೆ. ಇದರಿಂದ ಸುಮಾರು 9 ಫ್ಯಾಕ್ಟರಿಗಳು 649 ಡೀಲರ್‌ ಶಿಪ್‌ಗಳು, 84 ಸಾವಿರ ಉದ್ಯೋಗಗಳು ನಾಶವಾಗಿವೆ ಅಂತ ಮೋದಿ ವಿರುದ್ದ ಕಿಡಿಕಾರಿದ್ದಾರೆ. ಅಲ್ದೇ ಭಾರತದಲ್ಲಿ ನಿರುದ್ಯೋಗ ಪ್ರಮಾಣ ವಿನಾಶಕಾರಿಯಾಗಿ ಏರಿಕೆಯಾಗ್ತಿದೆ ಮೋದಿ ಜೀ ಮೊದಲು ಅದನ್ನ ಬಗೆಹರಿಸೋ ಬಗ್ಗೆ ಮಾತಾಡಿ ಅಂತ ಆಕ್ರೋಶ ಹೊರಹಾಕಿದ್ದಾರೆ.

-masthmagaa.com

Contact Us for Advertisement

Leave a Reply