ಚೀನಾದೊಂದಿಗೆ ಭಾರತ ಗಂಭೀರ ಗಡಿ ಸಮಸ್ಯೆಗಳನ್ನ ಹೊಂದಿದೆ: ಎಸ್‌ ಜೈಶಂಕರ್

masthmagaa.com:

ಭಾರತದ ಜೊತೆಗೆ ಗಡಿ ಪರಿಸ್ಥಿತಿ ಸ್ಟೇಬಲ್‌ ಇದೆ ಅಂತ ಚೀನಾ ನಿನ್ನೆಯಷ್ಟೇ ಹೇಳಿತ್ತು. ಆದ್ರೆ ಇದರ ಬೆನ್ನಲ್ಲೇ ಚೀನಾ ಹಾಗೂ ಭಾರತವನ್ನ ಬೇರ್ಪಡಿಸುವ ಲೈನ್‌ ಆಫ್‌ ಆಕ್ಚುವಲ್‌ ಕಂಟ್ರೋಲ್‌ (LAC) ಬಳಿ ಚೀನಾ ಜೊತೆಗೆ ಗಂಭೀರ ಸಮಸ್ಯೆಗಳಿವೆ ಅಂತ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಹೇಳಿದ್ದಾರೆ. ಧಾರವಾಡದಲ್ಲಿ ನಡೆದ ಕಾರ್ಯಕ್ರಮ ಒಂದ್ರಲ್ಲಿ ಮಾತಾಡಿರೊ ಜೈಶಂಕರ್‌, ʻನಾವು ಚೀನಾ ಜೊತೆ ಗಂಭೀರವಾದ ವಿವಾದಗಳನ್ನ ಹೊಂದಿದ್ದೇವೆ. ಅದ್ರಲ್ಲೂ 2020ರ ಗಲ್ವಾನ್‌ ಸಂಘರ್ಷದ ಬಳಿಕ ಬಾರ್ಡರ್‌ ಬಳಿ ಉದ್ವಿಗ್ನತೆ ಇದೆ. ಚೀನಾ ಜೊತೆಗಿನ ನಮ್ಮ ಸಂಬಂಧ ನಾರ್ಮಲ್‌ ಇಲ್ಲ. LAC ಬಳಿ ದೊಡ್ಡ ಸೇನಾ ಪಡೆ ಇರೋವರೆಗೆ ಅದು ನಾರ್ಮಲ್‌ ಆಗಲ್ಲʼ ಅಂತ ಹೇಳಿದ್ದಾರೆ. ಜೊತೆಗೆ ಚೀನಾ ಅಗ್ರೆಶನ್‌ ಬಗ್ಗೆ ಮಾತಾಡಿದ ಜೈಶಂಕರ್‌, 2020ರಲ್ಲಿ ಕೋವಿಡ್‌ ಇದ್ದ ಸಮಯದಲ್ಲಿ ಕೂಡ ಪ್ರಧಾನಿ ಮೋದಿ ಭಾರತೀಯ ಸೇನೆ ಹಾಗೂ ವಾಯು ಪಡೆಯನ್ನ ಗಡಿಗೆ ಕಳಿಸೋಕೆ ಹಿಂಜರಿಯಲಿಲ್ಲ. ಯಾಕಂದ್ರೆ ಗಡಿ ವಿಷಯದಲ್ಲಿ ಮಾಡಿಕೊಂಡಿರೊ ಒಪ್ಪಂದಗಳನ್ನ ಉಲ್ಲಂಘಿಸಿ LAC ಬಳಿ ಸೇನೆಯನ್ನ ನಿಯೋಜಿಸೊ ನೆರೆಯ ರಾಷ್ಟ್ರಕ್ಕೆ ಉತ್ತರ ಕೊಡಬೇಕಿತ್ತು. ಅದಕ್ಕೆ ದೊಡ್ಡ ಸಂಖ್ಯೆಯಲ್ಲಿ ಭಾರತ ಯೋಧರನ್ನ ಗಡಿಗೆ ಕಳಿಸಿತು ಅಂತ ಹೇಳಿದ್ದಾರೆ. ಇದೇ ವೇಳೆ ಗಡಿ ಸುರಕ್ಷತೆ ಬಗ್ಗೆ ಮಾತಾಡಿದ ಜೈಶಂಕರ್‌, ನಮ್ಮ ಸುತ್ತ ಅನೇಕ ನೆರೆಹೊರೆಯ ರಾಷ್ಟ್ರಗಳಿವೆ. ಅದ್ರಲ್ಲಿ ಬಹುತೇಕ ಎಲ್ಲರ ಜೊತೆಗಿನ ಸಂಬಂಧಗಳು ಉತ್ತಮ ರೀತಿಯಲ್ಲಿವೆ. ಆದ್ರೆ ಇಬ್ಬರ ಜೊತೆ ನಮಗೆ ಸಮಸ್ಯೆಗಳಿವೆ ಅಂತ ಪಾಕ್‌ ಹಾಗೂ ಚೀನಾ ಉಲ್ಲೇಖಿಸಿ ಹೇಳಿದ್ದಾರೆ. ಪಾಕಿಸ್ತಾನದ ಗಡಿಯಲ್ಲಿನ ಸಮಸ್ಯೆಗಳು ಸ್ಪಷ್ಟವಾಗಿವೆ. ನಾವು ಎಷ್ಟು ಸಹಿಸಿಕೊಳ್ಳಬೇಕೋ ಅದರ ಮಿತಿ ಮೀರಿ ಸಹಿಸಿಕೊಳ್ಳುತ್ತಿದ್ದೇವೆ. ನಾವು ಈ ಬಗ್ಗೆ ಕಠಿಣ ನಿಲುವನ್ನ ತೆಗೆದುಕೊಳ್ಳಬೇಕು. ಅದ್ರಿಂದ ಅಫೆಕ್ಟ್‌ ಆಗ್ತಿರೊ ನಾವೇ ಸರಿಯಾದ ನಿಲುವು ತೆಗೆದುಕೊಳ್ಳಲಿಲ್ಲ ಅಂದ್ರೆ ಜಗತ್ತು ತೆಗೆದುಕೊಳ್ಳುತ್ತೆ ಅಂತ ಎಕ್ಸಪೆಕ್ಟ್‌ ಮಾಡೋಕಾಗಲ್ಲ ಅಂತ ಹೇಳಿದ್ದಾರೆ. ಅಂದ್ಹಾಗೆ ಭಾರತದ ಜೊತೆಗೆ ಗಡಿ ಪರಿಸ್ಥಿತಿ ಸ್ಟೇಬಲ್‌ ಇದೆ. ಉಭಯ ರಾಷ್ಟ್ರಗಳ ಸಂಬಂಧಗಳನ್ನು ವೃದ್ದಿಸುವ ಕಡೆಗೆ ಚೀನಾ ಪ್ರಯತ್ನ ಮಾಡುತ್ತೆ. ನಮ್ಮ ಸಂಬಂಧದಲ್ಲಿ ಕೆಲವು ತೊಂದರೆಗಳು ಇರಬೋದು. ಆದ್ರೆ ಚೀನಾ ಮಾತ್ರ ಭಾರತದ ಜೊತೆಗೆ ಉತ್ತಮ ಸಂಬಂಧ ಹೊಂದಬೇಕು ಅಂತ ಬಯಸುತ್ತೆ ಅಂತ ಚೀನಾದ ಹಿರಿಯ ರಾಜತಾಂತ್ರಿಕ ಅಧಿಕಾರಿಗಳು ಹೇಳಿದ್ರು.

-masthmagaa.com

Contact Us for Advertisement

Leave a Reply