HDK ಹೃದಯ ಚಿಕಿತ್ಸೆ ಸಕ್ಸಸ್: MLC ಸ್ಥಾನಕ್ಕೆ ಮರಿತಿಬ್ಬೇಗೌಡ ರಾಜೀನಾಮೆ!

masthmagaa.com:

ಮಾಜಿ ಸಿಎಂ HD ಕುಮಾರಸ್ವಾಮಿ ಅವ್ರ ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಚೆನ್ನೈನ ಅಪೋಲೊ ಹಾಸ್ಪಿಟಲ್‌ನಲ್ಲಿ ನುರಿತ ವೈದ್ಯರ ತಂಡದಿಂದ ಸುಮಾರು 2 ಗಂಟೆಗಳ ಕಾಲ ಈ ಚಿಕಿತ್ಸೆ ನಡೆದಿದೆ ಅಂತ ಮಾಹಿತಿ ಲಭ್ಯವಾಗಿದೆ. ಕಳೆದ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ HDKಗೆ ಇಂದು ಮೂರನೇ ಬಾರಿ ಹೃದಯ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಅಂದ್ಹಾಗೆ ಕುಮಾರಸ್ವಾಮಿ ಅವ್ರಿಗೆ ಹುಟ್ಟಿನಿಂದಲೆ ಹೃದಯದ ಕವಾಟ ಒಂದ್ರಲ್ಲಿ ಸಮಸ್ಯೆ ಇತ್ತು. ಹೀಗಾಗಿ ಈ ಹಿಂದೆ ಎರಡು ಬಾರಿ ಪ್ರಾಣಿಜನ್ಯ ಪದಾರ್ಥಗಳಿಂದ ತಯಾರಿಸಿದ ʻಟಿಶ್ಯೂ ಸ್ಟೆಂಟ್‌ʼ ಅಳವಡಿಸಲಾಗಿತ್ತು. ಆದ್ರೆ ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ಲೋಹದ ಸ್ಟೆಂಟ್‌ ಹಾಕಿ ಈಗ ಹಾರ್ಟ್‌ ಸರ್ಜರಿ ಮಾಡಲಾಗಿದೆ. ಹೀಗಾಗಿ ಈಗ ಆ ಲೋಹದ ಸ್ಟಂಟ್‌ ಅಳವಡಿಕೆ ಮಾಡಿರೊ ಹಾರ್ಟ್‌ ಸರ್ಜರಿ ಸಕ್ಸಸ್‌ ಆಗಿದೆ. ಇನ್ನು ಮೂರ್ನಾಲ್ಕು ದಿನ ವಿಶ್ರಾಂತಿ ಪಡೆಯಲಿರೊ HDK, ಮಾರ್ಚ್‌ 25ರಿಂದ ಲೋಕಸಭೆ ಚುನಾವಣಾ ಪ್ರಚಾರದ ಕೆಲ್ಸಕ್ಕೆ ವಾಪಸ್ಸಾಗಲಿದ್ದಾರೆ ಅಂತ ಮಾಹಿತಿ ಸಿಕ್ಕಿದೆ. ಇನ್ನು ಚೆನ್ನೈನಲ್ಲಿ ಸರ್ಜರಿ ಆಗ್ತಿದ್ದಂತೆ ಕುಮಾರಸ್ವಾಮಿ ಅವ್ರನ್ನ ನೋಡಲು ಶಾಸಕರಾದ ಸಮೃದ್ಧಿ ಮಂಜು, ಹರೀಶ್ ಗೌಡ ಸೇರಿದಂತೆ ಜೆಡಿಎಸ್‌ ನಾಯಕರು ಆಸ್ಪತ್ರೆಗೆ ಆಗಮಿಸಿದ್ದಾರೆ. ಅಲ್ದೇ ಇತ್ತ ರಾಮನಗರ, ಹಾಸನಗಳಲ್ಲಿ HDK ಅವ್ರ ಅಭಿಮಾನಿಗಳು, ಬೆಂಬಲಿಗರು ಕುಮಾರಸ್ವಾಮಿ ಅವ್ರು ಬೇಗ ಗುಣಮುಖರಾಗ್ಲಿ ಅಂತ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಇನ್ನೊಂದೆಡೆ ಇತ್ತ ರಾಜ್ಯದಲ್ಲಿ ಜೆಡಿಎಸ್ MLC ಮರಿತಿಬ್ಬೇಗೌಡ ತಮ್ಮ ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಖುದ್ದು ಸಭಾಪತಿ ಬಸವರಾಜ್‌ ಹೊರಟ್ಟಿ ಅವ್ರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಗೌಡ, ಇದು ನನ್ನ ಸ್ವ ಇಚ್ಛೆಯಿಂದ ನಿರ್ಧಾರ ಕೈಗೊಂಡಿದ್ದೀನಿ ಅಂದಿದ್ದಾರೆ. ಅಲ್ದೇ ಜೆಡಿಎಸ್ ನಾಯಕರ ಬಗ್ಗೆ ಅಸಮಾಧಾನ ಹೊರಹಾಕಿದ ಅವ್ರು ಪಕ್ಷಕ್ಕೂ ಗುಡ್‌ಬೈ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply