ಕುತೂಹಲ ಮೂಡಿಸಿದ ಸೂರಜ್‌ ರೇವಣ್ಣ-DCM ಡಿಕೆಶಿ ಭೇಟಿ!

masthmagaa.com:

ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ದೇಶದಲ್ಲಿ ರಾಜಕೀಯ ಕಾವು ಜೋರಾಗಿದೆ. ಕ್ಷಿಪ್ರ ಬೆಳವಣಿಗೆಗಳು ನಡೀತಿವೆ. ಇದ್ರ ಮಧ್ಯೆ ಈಗ JDSನ MLC ಸೂರಜ್ ರೇವ‍ಣ್ಣ KPCC ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್‌ ಮನೆಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ. ಈ ವೇಳೆ ಉಭಯ ನಾಯಕರು ಗೌಪ್ಯ ಮಾತುಕತೆ ನಡೆಸಿದ್ದು, ಯಾವುದೇ ಗುಟ್ಟು ಬಿಟ್ಟು ಕೊಟ್ಟಿಲ್ಲ ಅಂತ ಗೊತ್ತಾಗಿದೆ. ಇತ್ತ ಬಿಜೆಪಿ ಜೊತೆ ಮಾಜಿ ಸಿಎಂ HDK ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಇದೇ ವೇಳೆ ಈ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಕೂತುಹಲ ಮೂಡಿಸಿದೆ.

-masthmagaa.com

Contact Us for Advertisement

Leave a Reply