ಸತತ ಮೂರನೇ ದಿನ ಕುಸಿದ ಷೇರುಪೇಟೆ! HDFC ಮತ್ತೆ 3% ಇಳಿಕೆ!

masthmagaa.com:

HDFC ಬಿರುಗಾಳಿಯಿಂದ ನೆನ್ನೆ ಅಧಃಪತನ ಆಗಿದ್ದ ಮಾರ್ಕೆಟ್‌ ಸತತ ಮೂರನೇ ದಿನ ಕುಸಿತ ಅನುಭವಿಸಿದೆ. ನಿಫ್ಟಿ 110 ಪಾಯಿಂಟ್‌ ಕುಸಿದು 21,462.25ರಲ್ಲಿ ಅಂತ್ಯವಾದ್ರೆ, ಸೆನ್ಸೆಕ್ಸ್‌ 314 ಅಂಕ ಕುಸಿತ ಕಂಡು 71,186.86ರಲ್ಲಿ ಅಂತ್ಯವಾಗಿದೆ. ಮೂರು ದಿನದಲ್ಲಿ ಮಾರ್ಕೆಟ್‌ ಸುಮಾರು 3% ಬಿದ್ದಿದೆ. HDFCಯಂತಹ ದೊಡ್ಡ ಷೇರುಗಳು ಕುಸೀತಾ ಇರೋದು ಮಾರ್ಕೆಟ್‌ ಮೇಲೆ ಪ್ರಭಾವ ಬೀರಿದೆ. ಗುರುವಾರ ಕೂಡ 3% ಕುಸಿದ HDFC ಷೇರುಗಳು 2 ದಿನದಲ್ಲಿ 11% ಕುಸಿತ ಅನುಭವಿಸಿವೆ. ಅಂದ್ಹಾಗೆ ಮಾರ್ಕೆಟ್‌ ವ್ಯಾಲೂವೇಷನ್‌ ಜಾಸ್ತಿ ಇದ್ದಿದ್ರಿಂದ ಹೂಡಿಕೆದಾರರು ಪ್ರಾಫಿಟ್‌ ಬುಕ್ಕಿಂಗ್‌ ಮಾಡೋಕೆ ಟ್ರಿಗರ್‌ ಬೇಕಿತ್ತು. HDFCಯಿಂದ ಆ ಟ್ರಿಗರ್‌ ಸಿಕ್ತು ಅಂತ ವಿಶ್ಲೇಷಣೆ ಮಾಡಲಾಗ್ತಿದೆ. ಅಲ್ಲದೇ ಇತ್ತೀಚಿನ ಅಮೆರಿಕದ ಆರ್ಥಿಕ ಪರ್ಫಾರ್ಮೆನ್ಸ್‌ ಚೆನ್ನಾಗಿದ್ದಿದ್ರಿಂದ ಅಮೆರಿಕದ ಬಾಂಡ್‌ಗಳ ಮೇಲಿನ ರಿಟರ್ನ್ಸ್‌ ಜಾಸ್ತಿಯಾಗಿದೆ. ಹೀಗಾಗಿ ಅಮೆರಿಕ ಇಂಟರೆಸ್ಟ್‌ ರೇಟ್‌ ಕಟ್‌ ಮಾಡೋದು ಡಿಲೇ ಆಗ್ಬಹುದು ಅಂತ ಹೇಳಲಾಗ್ತಿದೆ. ಇದು ಕೂಡ ಮಾರ್ಕೆಟ್‌ ಮೇಲೆ ಸೆಲ್ಲಿಂಗ್‌ ಪ್ರೆಶರ್‌ನ ಒಡ್ತಾ ಇದೆ.

ಇನ್ನು ಗುರುವಾರದ ವಹಿವಾಟಿನಲ್ಲಿ

ಟಾಪ್‌ ಗೇನರ್ಸ್‌

ಸನ್‌ ಫಾರ್ಮಾ ‌ +2.83% ₹1,335.75 ₹36.75
ಸಿಪ್ಲಾ +2.24% ₹1,322.95 ₹28.95
ಟೆಕ್‌ ಮಹೀಂದ್ರಾ +2.14% ₹1,355.15 ₹28.40
ಟಾಟಾ ಮೋಟಾರ್ಸ್‌ +1.68% ₹819.05 ₹13.50
ಆಕ್ಸಿಸ್‌ ಬ್ಯಾಂಕ್‌ ‌ +1.40% ₹1,097.50 ₹15.20

ಟಾಪ್‌ ಲೂಸರ್ಸ್‌

LTI ಮೈಂಡ್‌ ಟ್ರೀ ‌ -10.72% ₹147.25 ₹672.60
HDFC ಬ್ಯಾಂಕ್ -3.34% ₹1,537.5 ₹51.35
NTPC -3.23% ₹113.1 ₹10.00
ಟೈಟಾನ್‌ -2.49% ₹15.1 ₹95.35
ಏಷಿಯನ್‌ ಪೇಂಟ್ಸ್‌ -2.42% ₹131.65 ₹78.45

ಇನ್ನು ಸೆಕ್ಟರ್‌ವೈಸ್‌ ನೋಡಿದಾಗ ನಿಫ್ಟಿ ಡ್ಯೂರೇಬಲ್ಸ್‌ 1.7%, ಫಿನಾನ್ಷಿಯಲ್‌ ಸರ್ವೀಸಸ್‌ 1%, ಮೆಟಲ್‌ 0.84%, ಪ್ರೈವೇಟ್‌ ಬ್ಯಾಂಕ್‌ 0.82% ಕುಸಿದಿವೆ. ಆದ್ರೆ ನಿಫ್ಟಿ ಫಾರ್ಮಾ ಮಾತ್ರ 1.03% ಏರಿಕೆ ಕಂಡಿದೆ.

-masthmagaa.com

Contact Us for Advertisement

Leave a Reply