HDFC 3ನೇ ತ್ರೈಮಾಸಿಕ ವರದಿ: ಲಾಭದಲ್ಲಿ 33.5ರಷ್ಟು ಏರಿಕೆ

masthmagaa.com:

ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್‌ HDFC ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕ ಫಲಿತಾಂಶವನ್ನ ಪ್ರಕಟಿಸಿದೆ. ಮೂರನೇ ತ್ರೈಮಾಸಿಕದ ಮೂರು ತಿಂಗಳ ಅವಧಿಯಲ್ಲಿ ಬ್ಯಾಂಕ್‌ ಬರೋಬ್ಬರಿ 16,372 ಕೋಟಿ ರೂ. ನಿವ್ವಳ ಲಾಭ ವರದಿ ಮಾಡಿದೆ. ವರ್ಷದ ಹಿಂದಿನ ಇದೇ ಡಿಸೆಂಬರ್‌ ತ್ರೈಮಾಸಿಕದಲ್ಲಿ HDFC 12,259 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಈ ವರ್ಷ ಬ್ಯಾಂಕ್‌ನ ಲಾಭದಲ್ಲಿ ಶೇ. 33.5ರಷ್ಟು ಏರಿಕೆ ಕಂಡು ಬಂದಿದೆ. ಬ್ಯಾಂಕಿನ ಒಟ್ಟು ಅನುತ್ಪಾದಕ ಆಸ್ತಿಗಳು (NPA) ಶೇ.1.26ರಷ್ಟು ಇದ್ದು, ಕಳೆದ ವರ್ಷದ ಶೇ. 1.23ಕ್ಕೆ ಹೋಲಿಸಿದರೆ ಹೆಚ್ಚಾಗಿದೆ. ಮತ್ತೊಂದೆಡೆ, ತ್ರೈಮಾಸಿಕದಲ್ಲಿ ನಿವ್ವಳ NPA ಕಳೆದ ವರ್ಷದ ಶೇ. 0.33ಕ್ಕೆ ಹೋಲಿಸಿದರೆ ಈ ಬಾರಿಯ ಡಿಸೆಂಬರ್‌ನಲ್ಲಿ ಶೇ. 0.31ರಷ್ಟಿದೆ. ಬ್ಯಾಂಕ್‌ನ ಒಟ್ಟು ಸಾಲಗಳು ಶೇ. 62.4ರಷ್ಟು ಜಿಗಿದು 24.69 ಲಕ್ಷ ಕೋಟಿ ರೂ.ಗೆ ತಲುಪಿದೆ. ಬ್ಯಾಂಕಿನ ದೇಶೀಯ ಚಿಲ್ಲರೆ ಸಾಲಗಳು ಶೇ. 111ರಷ್ಟು ಹೆಚ್ಚಾಗಿವೆ. ಬ್ಯಾಂಕಿನ ವಾಣಿಜ್ಯ ಮತ್ತು ಗ್ರಾಮೀಣ ಸಾಲಗಳು ಶೇ. 31.4ರಷ್ಟು ಹಾಗೂ ಕಾರ್ಪೊರೇಟ್ ಮತ್ತು ಸಗಟು ಸಾಲಗಳು ಶೇ.11.2ರಷ್ಟು ಹೆಚ್ಚಾಗಿವೆ.

-masthmagaa.com

Contact Us for Advertisement

Leave a Reply