ಷೇರುಪೇಟೆ ರಕ್ತಪಾತ: ಕುಸಿದ HDFC ಷೇರು, ಬಿದ್ದ ಬ್ಯಾಂಕಿಂಗ್‌ ಕ್ಷೇತ್ರ

masthmagaa.com:

ಬುಧವಾರ ಭಾರತದ ಷೇರು ಮಾರುಕಟ್ಟೆಯಲ್ಲಿ ಅಕ್ಷರಶಃ ರಕ್ತಪಾತ ನಡೆದಿದೆ. ಮಾರ್ಕೆಟ್‌ ಕ್ರ್ಯಾಶ್‌ ಆಗಿದೆ…. HDFC ಬ್ಯಾಂಕ್‌ನ ಷೇರುಗಳು ಕುಸಿಯೋದ್ರ ಜೊತೆಗೆ ಇಡೀ ಮಾರುಕಟ್ಟೆಯೇ ನೆಲಕ್ಕುರುಳಿದೆ. ನಿಫ್ಟಿ 460 ಅಂಕ ಕುಸಿಯೋದ್ರೊಂದಿಗೆ 21,571.95ರಲ್ಲಿ ಅಂತ್ಯವಾದ್ರೆ, ಸೆನ್ಸೆಕ್ಸ್‌ 1,628 ಪಾಯಿಂಟ್‌ ಕುಸಿಯೋ ಮೂಲಕ 71,500.76ರಲ್ಲಿ ಈ ಯಾತನೆಯಿಂದ ಮುಕ್ತಿ ಹೊಂದಿದೆ. ನಿಫ್ಟಿ 2.09% ಹಾಗು ಸೆನ್ಸೆಕ್ಸ್‌ 2.23% ಕುಸಿದಿವೆ. ಕಳೆದ 18 ತಿಂಗಳಲ್ಲೇ ಭಾರತದ ಮಾರ್ಕೆಟ್‌ನಲ್ಲಿದು ಬಹುದೊಡ್ಡ ಕುಸಿತ. ಈ ಪತನಕ್ಕೆ ಮುಖ್ಯ ಕಾರಣ ಅಂದ್ರೆ HDFCಯ Q3 ವರದಿ. ನೆನ್ನೆ HDFC ತನ್ನ ಮೂರನೇ ತ್ರೈಮಾಸಿಕದ ಬ್ಯುಸಿನೆಸ್‌ ರಿಪೋರ್ಟ್‌ನ್ನ ಸೆಬಿಗೆ ನೀಡಿತ್ತು. ಅದ್ರಲ್ಲಿ 16,372 ಕೋಟಿ ಲಾಭ ಗಳಿಸಿ Y-O-Y 34% ನೆಟ್‌ ಪ್ರಾಫಿಟ್‌ನ್ನ ತೋರಿಸಿತ್ತು. ಅಲ್ಲದೇ 24% ನೆಟ್‌ ಇಂಟರೆಸ್ಟ್‌ ಇನ್‌ಕಂ ನಿವ್ಹಳ ಬಡ್ಡಿ ಆದಾಯ ತೋರಿಸಿತ್ತು. ಆದ್ರೆ ಈ ನೆಟ್‌ ಇಂಟರೆಸ್ಟ್‌ ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಕ್ಕಿಂತ ಕಡಿಮೆ ಇತ್ತಂತೆ, ಹಾಗಾಗಿ ಮಾರ್ಕೆಟ್‌ ಓಪನ್‌ ಆಗ್ತಿದ್ದಂತೆ HDFC ಷೇರುಗಳು ದಬದಬ ಅಂತ ಬೀಳೋಕೆ ಶುರುವಾದ್ವು. ದಿನದಂತ್ಯಕ್ಕೆ ಬರೋಬ್ಬರಿ 8.16% ಬಿದ್ವು… ಕೋವಿಡ್‌ ನಂತ್ರ ಇದು HDFCಯ ವರ್ಸ್ಟ್‌ ಪರ್ಫಾರ್ಮೆನ್ಸ್‌. ಈ ಪತನದಿಂದ ಭಾರತದ ಎರಡನೇ ಅತ್ಯಂತ ಮೌಲ್ಯಯುತ ಬ್ಯಾಂಕ್‌ನ ಷೇರುಗಳಲ್ಲಿ ಹೂಡಿಕೆದಾರರು ಸುಮಾರು 1 ಲಕ್ಷ ಕೋಟಿ ನಷ್ಟ ಅನುಭವಿಸಿದ್ರು. ಅತ್ತ HDFC ಷೇರುಗಳು ಬೀಳ್ತಿದ್ದಂತೆ ಅದ್ರ ಎಫೆಕ್ಟ್‌ ಉಳಿದೆಲ್ಲ ಬ್ಯಾಂಕ್‌ ಷೇರುಗಳ ಮೇಲೆ ಕೂಡ ಆಯ್ತ. Axis, ICICI, ಕೋಟಕ್‌, SBI, ಇಂಡಸ್‌ ಇಂಡ್‌ ಬ್ಯಾಂಕ್‌ ಎಲ್ಲಾ 2-2% ಬಿದ್ವು. ಒಟ್ಟಾರೆ ಬ್ಯಾಂಕ್‌ ಸೆಕ್ಟರ್‌ 4.28% ಕುಸಿತ ಕಾಣ್ತು. ಅತ್ತ ಮೆಟಲ್‌, ರಿಯಲ್‌ ಎಸ್ಟೇಟ್‌, ಆಟೋಮೊಬೈಲ್‌, ಮೀಡಿಯಾ ಹೆಲ್ತ್‌ ಕೇರ್‌ ಷೇರುಗಳು ಕೂಡ ಕುಸಿತ ಕಂಡ್ವು.

ಇನ್ನು ಈ ರಕ್ತಪಾತಕ್ಕೆ ಕೇವಲ HDFC ಪರ್ಫಾರ್ಮೆನ್ಸ್‌ ಅಷ್ಟೇ ಕಾರಣ ಅಲ್ಲ. ಆ ಕಡೆ ಡಾಲರ್‌ ಕೂಡ ಉಳಿದೆಲ್ಲ ಕರೆನ್ಸಿಗಿಂತ ಸ್ಟ್ರೆಂಥನ್‌ ಆಗಿತ್ತು. ಒಂದು ತಿಂಗಳ ಪೀಕ್‌ ಪಾಯಿಂಟ್‌ನ ರೀಚ್‌ ಆಗಿತ್ತು. ಈ ರೀತಿ ಡಾಲರ್‌ ಮೌಲ್ಯ ಏರಿಕೆಯಾಗೋದು ಸಹಜವಾಗಿ ಕಚ್ಚಾ ತೈಲ, ಸೇರಿದಂತೆ ಮುಖ್ಯ ಕಮಾಡಟಿಗಳನ್ನ ದುಬಾರಿ ಮಾಡುತ್ವೆ. ಹೀಗಾಗಿ ಭಾರತದ ಇಂಪೋರ್ಟ್‌ ಕಾಸ್ಟ್‌ ಜಾಸ್ತಿಯಾಗುತ್ತೆ. ಇನ್ನು ಅತ್ತ ಚೀನಿ ಮಾರುಕಟ್ಟೆ ಸೇರಿದಂತೆ ಏಷ್ಯಾದ ಸ್ಟಾಕ್‌ಮಾರ್ಕೆಟ್‌ಗಳು ಕೂಡ ನೆಗಟಿವ್‌ ಟ್ರೆಂಡ್‌ನಲ್ಲಿ ಇದ್ವು. ಇನ್ನು ಅತ್ತ ಅಮೆರಿಕ ಮಾರ್ಚ್‌ನಲ್ಲಿ ಇಂಟರೆಸ್ಟ್‌ ರೇಟ್‌ ಕಟ್‌ ಮಾಡಲ್ಲ ಅನ್ನೋ ಸೂಚನೆಗಳು ಬಂದ್ವು. ಇವೆಲ್ಲ ಕಾರಣಗಳು ಕೂಡ ಮಾರ್ಕೆಟ್‌ ಕ್ರ್ಯಾಶ್‌ ಆಗೋಕೆ ಕಾರಣವಾದವು.

ಇನ್ನು ಬುಧವಾರದ ವಹಿವಾಟಿನಲ್ಲಿ

ಟಾಪ್‌ ಗೇನರ್ಸ್‌

ICICI ಲಾಂಬರ್ಡ್ ‌ +5.84% ₹1,454.45 ₹80.25
L&t ಟೆಕ್ನಾಲಜಿ +3.56% ₹5,540.05 ₹190.25
ಒರ್ಯಾಕಲ್‌ ಫಿನ ಸರ್ವೀಸ್ +3.53% ₹5,086.2 ₹173.3
ಬಿರ್ಲಾಸಾಫ್ಟ್‌ +2.28% ₹798.45 ₹17.8
ಪಾಲಿಕ್ಯಾಬ್ ‌ +2.27% ₹4,439.3 ₹98.5

ಟಾಪ್‌ ಲೂಸರ್ಸ್‌

IEX ‌ -10.27% ₹147.25 ₹16.85
HDFC ಬ್ಯಾಂಕ್ -8.44% ₹1,537.5 ₹141.65
SAIL -5.4% ₹113.1 ₹6.45
ವೋಡಾಫೋನ್‌ ಐಡಿಯಾ -4.13% ₹15.1 ₹0.65
ಟಾಟಾ ಸ್ಟೀಲ್ ‌ -4.08% ₹131.65 ₹5.60

-masthmagaa.com

Contact Us for Advertisement

Leave a Reply