ಹೆಡ್‌ ಬುಶ್‌ ಸಿನಿಮಾ ವಿವಾದ! ವೀರಗಾಸೆ ಕಲಾವಿದರ ಆರೋಪ ಏನು?

masthmagaa.com:

ಇತ್ತೀಚಿಗೆ ತಾನೇ ರಿಲೀಸ್‌ ಆಗಿರೋ ಡಾಲಿ ಧನಂಜಯ್‌ ಅಭಿನಯದ ʻಹೆಡ್‌ ಬುಷ್‌ʼ ಸಿನಿಮಾ ವಿವಾದಕ್ಕೀಡಾಗಿದೆ. ಸಿನಿಮಾದಲ್ಲಿ ವೀರಭದ್ರ ದೇವರ ವೀರಗಾಸೆಗೆ ಅವಮಾನ ಮಾಡಲಾಗಿದೆ ಅಂತ ಆರೋಪ ಕೇಳಿಬಂದಿದೆ. ಫೈಟಿಂಗ್‌ ಸೀನ್‌ ಒಂದ್ರಲ್ಲಿ ವೀರಗಾಸೆ ಕಲಾವಿದರಿಗೆ ಒದೆಯಲಾಗಿದೆ. ಅದು ಕಲೆ ಮತ್ತು ವೀರಭದ್ರ ದೇವರಿಗೆ ಮಾಡಿದ ಅಪಮಾನ ಅಂತ ವೀರಗಾಸೆ ಕಲಾವಿದರು ಆಕ್ಷೇಪಿಸಿಲಾಗಿದೆ. ಜೊತೆಗೆ ಸಿನಿಮಾದಲ್ಲಿ ತೋರಿಸಿರೊ ದ್ರೌಪದಮ್ಮನ ಕರಗಕ್ಕೂ ಅವಮಾನ ಮಾಡಲಾಗಿದೆ ಅಂತ ಆರೋಪಿಸಲಾಗಿದೆ.ಈ ದೃಶ್ಯಗಳನ್ನ ಸಿನಿಮಾದಿಂದ ಕೈ ಬಿಡಬೇಕು ಹಾಗೂ ಚಿತ್ರ ತಂಡ ಕ್ಷಮೆ ಕೇಳಬೇಕು ಅಂತ ಆಗ್ರಹಿಸಿದ್ದಾರೆ. ಹೀಗಾಗಿ ನಟ ಧನಂಜಯ್‌ ತಮ್ಮ ತಂಡದೊಂದಿಗೆ ಪತ್ರಿಕಾಗೋಷ್ಠಿ ಮಾಡಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ನಾವು ಯಾರನ್ನೂ ನೋಯಿಸುವ ಉದ್ದೇಶದಿಂದ ಸಿನಿಮಾ ಮಾಡಿಲ್ಲ. ದೇವರ ಬಗ್ಗೆ, ವೀರಗಾಸೆ ಹಾಗೂ ಕರಗದ ಬಗ್ಗೆ ನಮಗೂ ಅಪಾರವಾದ ಅಭಿಮಾನ, ಭಕ್ತಿ ಇದೆ. ಆದರೂ, ನಿಮಗೆ ನೋವು ಆಗಿದ್ದರೆ ಕ್ಷಮಿಸಿ ಅಂತ ನಿರ್ದೇಶಕ ಶೂನ್ಯ ಅವರು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ. ಆದರೆ ಚಿತ್ರದ ಕಥೆಗಾರ ಅಗ್ನಿ ಶ್ರೀಧರ್‌ ಮತಾಡಿದ್ದು, ಧನಂಜಯ್‌ ಕ್ಷಮೆ ಕೇಳಿದ್ದಾರೆ. ನಾನು ಕೇಳಲ್ಲ. ಕಾನೂನು ಹೋರಾಟ ಆದ್ರೆ ನೊಡ್ಕೋತಿನಿ ಅಂತ ಹೇಳಿದ್ದಾರೆ.

-maasthmagaa.com

Contact Us for Advertisement

Leave a Reply